ಒಂದು ಘಟನೆ ಜೀವನವನ್ನೇ ಬದಲಿಸುತ್ತದೆ !!!!!!!!

ಒಂದು ಘಟನೆ ಜೀವನವನ್ನೇ ಬದಲಿಸುತ್ತದೆ

ಒಂದು ಘಟನೆ ಜೀವನವನ್ನೇ ಬದಲಿಸುತ್ತದೆ

ಒಂದು ಘಟನೆ ಜೀವನವನ್ನೇ ಬದಲಿಸುತ್ತದೆ

1998 ಜನವರಿ ಬೆಳಗ್ಗೆ ಮನೆ ಮುಂದೆ ಯಾರೋ ಬಂದು ಜೋರಾಗಿ ಬೈಯುತ್ತಿದ್ದರು ಅದನ್ನು ಕೇಳಿ ಹೊರಗೆ ಬಂದೆ , ಮನೆ ಎದುರು ಸಾಲ ಕೊಟ್ಟವರು ಸಾಲ ವಾಪಸ್ಸುಕೇಳಲು ಬಂದು ಜಗಳವಾಡುತ್ತಿದ್ದರು, ನನ್ನ ತಾಯಿ ಅವರ ಮುಂದೆ ಏನು ಹೇಳಲಾದೇ ಒದ್ದಾಡುತ್ತಿದ್ದರು , ನನ್ನ ತಂದೆ ಒಬ್ಬ ಟೈಲರ್ , ಮತ್ತು ಅಜ್ಜಿ ಇಬ್ಬರು ತಮ್ಮಂದಿರು, ಒಬ್ಬ ತಂಗಿ ನಾನೆ ಮನೆಗೆ ದೊಡ್ಡ ಮಗ, ಸಾಲ ಕೊಟ್ಟವರು ಮನೆ ಮುಂದೆ ಬಂದು ಜಗಳವಾಡುತ್ತಿದ್ದದ್ದು ಇದು ಒಂದು ದಿನದ ಕತೆಯಲ್ಲ , ಪ್ರತಿ ದಿನ ಯಾರಾದರೂ ಒಬ್ಬರು ಬಂದು ಜಗಳವಾಡುತ್ತಿದ್ದರು , ಮನೆಯಲ್ಲಿ ನನ್ನನ್ನು ನೋಡಿ ಎಲ್ಲರಿಗು ಬಹಳ ಬೇಸರವಾಗಿತ್ತು . ಇದಕ್ಕೆ ಕಾರಣ ನಾನು ಮಾಡಿದ್ದ ಫೈನಾನಸಿಯಲ್ ಮಿಸ್ಟೇಕ್ಸ್ .

ಎಲ್ಲರಂತೆ ನನಗೂ ನನ್ನ ತಂದೆ ತಾಯಿ ಮತ್ತು ನನ್ನ ಫ್ಯಾಮಿಲಿ ಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಇತ್ತು, ಆದರೆ ನಾನು ಜೀವನದಲ್ಲಿ ಯಶಸ್ವಿ ಯಾಗ ಬೇಕು ಬಿಸಿನೆಸ್ ಚೆನ್ನಾಗಿ ಮಾಡಬೇಕು ಎನ್ನುವ ಆತುರದಲ್ಲಿ ಸಾಲಮಾಡಿ ಪ್ರಿಂಟಿಂಗ್ ಪ್ರೆಸ್ ಪ್ರಾರಂಭ ಮಾಡಿದೆ ಆದರೆ ಬಿಸಿನೆಸ್ ಹೇಗೆ ಮಾಡಬೇಕು, ಬಿಸಿನೆಸ್ ನಲ್ಲಿ ನಂಬರ್ಸ್ ಹೇಗೆ ನೋಡಬೇಕು,ಹೇಗೆ ವರ್ಕಿಂಗ್ ಕ್ಯಾಪಿಟಲ್ ಮ್ಯಾನೇಜ್ ಮಾಡಬೇಕು , ಹಣಕಾಸನ್ನು ಹೇಗೆ ಹ್ಯಾಂಡಲ್ ಮಾಡಬೇಕು , ಎಂದು ತಿಳಿದಿರಲಿಲ್ಲ ,ಹಾಗೆ ನನ್ನ ರಾಂಗ್ ಹ್ಯಾಬಿಟ್ಸ್, ಈ ಎಲ್ಲಾ ಒಟ್ಟಿಗೆ ಸೇರಿ ನನಗೆ ಅರಿವಾಗುವ ಮುಂಚೇಯೇ ನಾನು 1000000 ಸಾಲದ ಸುಳಿಯಲ್ಲಿ ಸಿಲುಕಿದ್ದೇ , ಮುಂದೆ ಏನು ಮಾಡಬೇಕು ಎಂದು ತಿಳಿಯದೆ ,ಎಲ್ಲವನ್ನು ಬಿಟ್ಟು ಎಲ್ಲಾದರೂ ಹೋಗಿಬಿಡಲಾ,ಅಥವಾ ನನ್ನ ಜೀವನವನ್ನೇ ಕೊನೆಗೊಳಿಸಲಾ ಹೀಗೇ ನಾನಾ ಯೋಚನೆಗಳು ನನ್ನ ತಲೆಯಲ್ಲಿ ಓಡುತಿತ್ತು .
ಈ ಪರಿಸ್ಥಿತಿ ಯಲ್ಲಿ ನನಗೆ ಜೀವನವೆಲ್ಲ ಪ್ರಾಬ್ಲೆಮ್ಸ್ , ಇದರಿಂದ ಹೊರಬರಲು ಸಾಧ್ಯವೇ ಇಲ್ಲ ನನ್ನ ಜೀವನ ಇಷ್ಟೇ ಎಂದು ಯೋಚಿಸುತ್ತಿದ್ದಾಗ ೧೯೯೮ ಆಗಸ್ಟ್ ನ್ಯೂಸ್ ಪೇಪರ್ ನಲ್ಲಿ ಒಂದು
ಜಾಹಿರಾತು ನೋಡಿದೆ “ನಿಮ್ಮ ಜೀವನ ಬದಲಾಗಬೇಕೇ ಹಾಗಾದರೆ ಈ ವರ್ಕ್ ಶಾಪ್ ಅಟೆಂಡ್ ಮಾಡಿ” ನಾನು ಇಂಟ್ರೋ ಸೆಶನ್ ಅಟೆಂಡ್ ಮಾಡಿದೆ ಆದರೆ ನನ್ನ ಬಳಿ ವರ್ಕ್ ಶಾಪ್ ಅಟೆಂಡ್ ಮಾಡಲು ಹಣವಿರಲಿಲ್ಲ ,ಆದರೆ ನನಗೆ ಅನ್ನಿಸಿತ್ತು ಈ ವರ್ಕ್ ಶಾಪ್ ನಾನು ಅಟೆಂಡ್ ಮಾಡಲೇ ಬೇಕೇ ಎಂದು , ನಾನು ೧ ತಿಂಗಳ ನಂತರ ಹಣ ಸೇರಿಸಿ ವರ್ಕ್ ಶಾಪ್ ಅಟೆಂಡ್ ಮಾಡಿದೆ ಇದು ನನ್ನ ಜೀವನವನ್ನೇ ಬದಲಿಸಿತು , (dr .ಭರತಚಂದ್ರ , ವಿನ್ನರ್ಸ್ ವರ್ಕ್ ಶಾಪ್ ) ಗುರಿಗಳು , ಟೈಮ್ ಮ್ಯಾನೇಜ್ ಮೆಂಟ್ , ಕಮ್ಯುನಿಕೇಷನ್ , ಸೆಲ್ಫ್ ಇಮೇಜ್ , ಮೈಂಡ್ ಪವರ್ ಈ ವಿಚಾರಗಳು ನನ್ನ ಮೈಂಡ್ ಸೆಟ್ಟನ್ನು ಬದಲಿಸಿತು ಅಲ್ಲಿಂದ ನಾನು ಹಿಂತಿರುಗಿ ನೋಡಲಿಲ್ಲ !!!!
ಈ ಘಟನೆಯಿಂದ ನಾನು ನನ್ನ ಜೀವನದಲ್ಲಿ ಕಲಿತ ಪಾಠ ಏನೆಂದರೆ
1.ಜೀವನದಲ್ಲಿ ಸಮಸ್ಯೆಗಳು ಇದ್ದೆ ಇರುತ್ತದೆ , ಆದರೆ ಸಮಸ್ಯೆ ಗಳ ಜೊತೆಯಲ್ಲಿ ದೊಡ್ಡ ಅವಕಾಶಗಳು ಬರುತ್ತವೆ
2. ಯಾವ ದಿನ ನಾವು ನಮ್ಮ ಜೀವನದಲ್ಲಿ ಹಳೆಯ ತಪ್ಪುಗಳನ್ನು ಬಿಟ್ಟು ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧರಿಸುತ್ತೇವೆಯೋ ಅದು ನಮ್ಮನು ನಮ್ಮ ಗುರಿ ಯಡೆಗೆ ಕರೆದೊಯುತ್ತದೆ
3. ಗುರು ಗುರಿ ಯಶಸ್ವೀ ಯಾಗಲು ಬಹಳ ಮುಖ್ಯ , ಕಲಿತು ಮುಂದುವರಿಯುವದು ನಮ್ಮ ನಷ್ಟವನ್ನು ಕಡಿಮೆ ಮಾಡುತ್ತದೆ
4. ಏನೇ ಬರಲಿ ಆತ್ಮ ವಿಶ್ವಾಸ ದೊಡ್ಡದಾಗಿರಲಿ !!!!!
ನಿಮ್ಮ ಜೀವನದಲ್ಲೂ ಈ ರೀತಿ ಅನುಭವ ವಿದ್ದರೆ ಕಾಮೆಂಟ್ ಮಾಡಿ !!!!!!

Similar Posts