ಕಲಿತವರಿಂದ ಕಲಿತ ಪಾಠ …!!!!!!!
ಕಲಿತವರಿಂದ ಕಲಿತ ಪಾಠ ...
ಚಂದ್ರ ಚಂದ್ರ ಕಾಫಿ ಕೊಡೆ , ಭಾನುವಾರ ಸಂಜೆ 5 ಗಂಟೆ ಸಮಯ , ನಾನು ನನ್ನ ಚಿಕ್ಕಅಜ್ಜಿ ಮನೆಯಲ್ಲಿ ಕುಳಿತಿದ್ದೆ , ನನ್ನ ತಾತ ನನ್ನನು ನೋಡಿ ಏನೋ ಸತ್ಯ ಯಾವಾಗ ಬಂದೆ, ಕಾಫಿ ಕುಡಿದ್ದಿಲ್ಲಾ ಅಂತ ಕಾಣುತ್ತೆ, ಕುಡಿದ್ದಿದರು ಪರವಾಗಿಲ್ಲ ಇನ್ನೊಂದುಸರಿ ನನ್ನ ಜೊತೆ ಕುಡಿ, ಮತ್ತೆ ಹೇಗಿದ್ದೀಯ ಮನೆಯಲ್ಲೆಲ್ಲ ಚೆನ್ನಾಗಿದ್ದಾರಾ ಎಂದರು ನಾನು ತಲೆ ಅಲ್ಲಾಡಿಸಿದೆ ,ಯಾಕೋ ಮುಖ ಒಂಥರಾ ಮಾಡಿಕೊಂಡಿದ್ದೀಯ , ಹುಷಾರಿಲ್ಲವಾ ?
ನಾನು ಇಲ್ಲ ತಾತ ಹುಷಾರಾಗಿದ್ದೀನಿ, ಸ್ವಲ್ಪ ಬೇಜಾರು ಅಷ್ಟೇ,
ತಾತ – ಏನಾಯಿತೋ ಮನೇಲಿ ಬೈದ್ರಾ
ನಾನು – ಇಲ್ಲ ತಾತ ಮನೆಗೆ ಹೋಗಿಲ್ಲ, ಕಾಲೇಜ್ ಮುಗಿಸಿ ಇಲ್ಲಿಗೆ ಬಂದೆ
ತಾತ – ಇವತ್ತು ಭಾನುವಾರ ಅಲ್ಲವೇನೋ ,ಈವತ್ತೆಂತ ಕಾಲೇಜು
ನಾನು – ತಾತ ಇವತ್ತು ನಮ್ಮ ಕಾಲೇಜ್ ಅಲ್ಲಿ ಸ್ಪೋರ್ಟ್ಸ್ ಡೇ ಇತ್ತು
ತಾತ – ಸರಿ ಅದಕ್ಕೆ ಯಾಕೆ ಬೇಜಾರಾಗಿದ್ದೀಯ
ನಾನು- ತಾತ , ನಾನು ಓದುತ್ತಿರುವುದು ಸಂಜೆ ಕಾಲೇಜು , ಯಾವಾಗ್ಲೂ ನನಗೆ ಒಂದು ಆಸೆ ನಾನು ಎಲ್ಲರಥರ ಎಂಜಾಯ್ ಮಾಡಬೇಕು, ಸ್ಪೋರ್ಟ್ಸ್ ,ಕಲ್ಚರಲ್ ಆಕ್ಟಿವಿಟಿ ಎಲ್ಲದರಲ್ಲೂ ವಿನ್ ಆಗಬೇಕು ಅಂತ, ಆದರೆ ಇವತ್ತು ನಾನು ರನ್ನಿಂಗ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ದೆ , ನನ್ನ ಸ್ನೇಹಿತರೆಲ್ಲ ನನ್ನನ್ನು ನೋಡಿ ನಗುವಂತಾಯಿತು , ರನ್ನಿಂಗ್ ನಲ್ಲಿ ಇದೆ ಮೊದಲನೇ ಸಲ ನಾನು ಪಾರ್ಟಿಸಿಪೇಟ್ ಮಾಡಿದ್ದು , ಎಲ್ಲರೂ ಓಡಿ ಫಿನಿಂಶಿಂಗ್ ಲೈನ್ ಮುಟ್ಟಿದರು ನಾನು ಮಾತ್ರ ಕಾಲು ಭಾಗದಷ್ಟು ಓಡಿಲ್ಲ , ನನ್ನ ಫ್ರೆಂಡ್ಸ್ ನನ್ನನ್ನ ನೋಡಿ ನಗುತ್ತಿದ್ದರು.
ನನ್ನ ಕೈಯಲ್ಲಿ ಯಾವುದನ್ನೂ ಗೆಲ್ಲಲು ಆಗುತ್ತಿಲ್ಲ, ತುಂಬಾ ಬೇಜಾರಾಗುತ್ತಿದೆ.
ಇನ್ನು ಮುಂದೆ ಯಾವುದರಲ್ಲೂ ಪರ್ಟಿಸಿಪೇಟ್ ಮಾಡಬಾರದು ಎಂದು ಅಂದುಕೊಂಡಿದ್ದೀನಿ
ಅಯ್ಯೋ , ಸತ್ಯ ಗೆಲ್ಲೋದು ಸೋಲೋದು ಆಮೇಲೆ, ಮೊದಲು ನಾವು ಪಾರ್ಟಿಸಿಪೇಟ್ ಮಾಡಬೇಕು ಇಲ್ಲದಿದ್ದರೆ ನಿನಗೆ ಹೇಗೆ ಗೊತ್ತಾಗುತ್ತೆ ನೀನು ಯಾವುದರಲ್ಲಿ ಸ್ಟ್ರಾಂಗ್ ಆಗಿದ್ದೀಯಾ ಅಂತ, ಒಂದು ಸರಿ ಸೋತು ಹೋದರೆ ನೀನು ಎಲ್ಲದರಲ್ಲೂ ,ಯಾವಾಗಲು ಸೋಲುತ್ತೀಯಾ ಅಂತ ಅಲ್ಲ, ಈ ಒಂದು ರನ್ನಿಂಗ್ ನಲ್ಲಿ ಸೋತಿದ್ದೀಯಾ ,ನೀನು ಪಾರ್ಟಿಸಿಪೇಟ್ ಮಾಡದೇ ಇದ್ದಿದ್ದರೆ ನಿನಗೆ ಗೊತ್ತೇ ಆಗುತ್ತಿರಲಿಲ್ಲ ನೀನು ರನ್ ಮಾಡುವುದನ್ನ ಕಲಿಬೇಕು ಅಂತ ಹೌದಲ್ವಾ , ನೋಡು ಪಾರ್ಟಿಸಿಪೇಟ್ ಮಾಡುವುದು ಮುಖ್ಯ ಮತ್ತು ಗೆಲ್ಲುವುದು ಮುಖ್ಯ , ಗೆಲ್ಲಬೇಕೆಂದರೆ ಮೊದಲು ಪಾರ್ಟಿಸಿಪೇಟ್ ಮಾಡಬೇಕು !!!!!
ನನ್ನ ತಾತ ಹೇಳಿದ ಮಾತು ಇವತ್ತಿಗೂ ಬಹಳ ಪ್ರಸ್ತುತ ಅಂತ ಅನ್ನಿಸುತ್ತದೆ(ಪಾರ್ಟಿಸಿಪೇಟ್ ಮಾಡುವುದು ಮುಖ್ಯ,ಪಾಸು ಫೇಲ್ ಆಮೇಲೆ ) !!!!!
ನೀವು ನಿಮ್ಮ ಅಜ್ಜಿ ಅಥವಾ ತಾತನಿಂದ ಕಲಿತ ಒಂದು ಲೈಫ್ ಲೆಸೆನ್ ಅನ್ನು ಕಾಮೆಂಟ್ ನಲ್ಲಿ ಶೇರ್ ಮಾಡಿ, ನಮ್ಮ ಹಿರಿಯರು ನಮ್ಮ ಆಸ್ತಿ ಅವರನ್ನು ಅವರ ಪಾಠಗಳನ್ನು ನೆನೆಯೋಣ …….