ಕಾನ್ಫಿಡೆನ್ಸ್ ಬೆಳೆಸಲು 6 ವಿಧಾನ ….
ಆಕ್ಷನ್ ನಿಂದ ಕಾನ್ಫಿಡೆನ್ಸ್
ಆಕ್ಷನ್ ನಿಂದ ಕಾನ್ಫಿಡೆನ್ಸ್
ನಾನು ಸುಮಾರು 13 ವರ್ಷದವನಿದ್ದಾಗ ನನಗೆ ಸ್ವಿಮ್ಮಿಂಗ್ ಕಲಿಯಲು ತುಂಬಾ ಇಷ್ಟವಿತ್ತು ಆದರೆ ನನ್ನ ತಂದೆ ನನಗೆ ಸ್ವಿಮ್ಮಿಂಗ್ ಕಲಿಯಲು ನನಗೆ ಒಪ್ಪಿಗೆ ಕೊಡಲಿಲ್ಲ ಸಾಕಷ್ಟು ದಿನ ನಾನು ಅವರನ್ನು ಕಾಡಿ ಬೇಡಿ ಕೊನೆಗೂ ನನಗೆ ಸ್ವಿಮ್ಮಿಂಗ್ ಪೂಲ್ ಗೆ ಹೋಗಲು ಸಮ್ಮತಿ ಸಿಕ್ಕಿತು , ಅದು ನನ್ನ ಗೆಳೆಯನ ಜೊತೆಯಲ್ಲಿ ನನಗಂತೂ ರಾತ್ರಿಯೆಲ್ಲಾ ನಿದ್ದೆ ಇಲ್ಲ ಯಾವಾಗ ಬೆಳಗಾಗುವುದೋ ಯಾವಾಗ ನಾನು ಸ್ವಿಮ್ಮಿಂಗ್ ಪೂಲ್ ಗೆ ಹೋಗುವೆನೋ ಎಂದು ಕಾಯುತಿದ್ದೆ ಕೊನೆಗೂ ಆ ಸಮಯ ಬಂದೇಬಿಟ್ಟಿತು ನಾನು ನನ್ನ ಗೆಳೆಯ ಅವನ ಅಣ್ಣ ಸೇರಿ ಪೂಲ್ ಗೆ ಹೋದೆವು , ನನ್ನ ಗೆಳೆಯನ ಅಣ್ಣ ನನ್ನನ್ನು ಕರೆದು ಪೂಲ್ ನಲ್ಲಿ ಬಿಳು ಎಂದ ನಾನು ಒಂದು ನಿಮಿಷವೂ ಯೋಚಿಸದೆ ಬಿದ್ದೆ ಕೆಲವು ಸೆಕೆಂಡ್ ನಂತರ ಅವನು ನನ್ನನು ಮೇಲೆತ್ತಿದ ಮತ್ತು ನಿನಗೆ ಸ್ವಿಮ್ಮಿಂಗ್ ಬರುವವರೆಗೂ 5 ಅಡಿ ಆಳ ಇರುವ ಕಡೆ ಬೀಳಬಾರದು ಎಂದು ಹೇಳಿದ , ಆದರೆ ಈ ಘಟನೆಯಿಂದ ನನಗೆ ನೀರಿನ ಭಯ ಅನ್ನುವುದು ಹೊರಟುಹೋಯಿತು ಕಾನ್ಫಿಡೆನ್ಸ್ ಅನ್ನುವುದು ಬರುವುದು ಸ್ವಿಮ್ಮಿಂಗ್ ಬಗ್ಗೆ ಓದುವುದರಿಂದ , ಅಥವಾ ಸ್ವಿಮ್ಮಿಂಗ್ ಮಾಡುವವರನ್ನು ನೋಡುವುದರಿಂದ ಎಲ್ಲ ಬದಲಿಗೆ ನೀರಿನಲ್ಲಿ ಬಿದ್ದು ಸ್ವಿಮ್ಮಿಂಗ್ ಬರದಿದ್ದರೂ ಕೈ ಕಾಲು ಆಡಿಸಿ ಸ್ವಿಮ್ಮಿಂಗ್ ಕಲಿಯುವುದರಿಂದ ಹಾಗೆ ಕಾನ್ಫಿಡೆನ್ಸ್ ಬರಬೇಕು ಎಂದರೆ ಮೊದಲು ನಮಗೆ ಆಕ್ಷನ್ ತೆಗೆದುಕೊಳ್ಳುವ ಗುಣ ನಾವು ಬಿಸಿನೆಸ್ ಮಾಡಲು, ಸ್ಟೇಜ್ ಮೇಲೆ ನಿಂತು ಮಾತನಾಡಲು, ಹೊಸಬರೊಡನೆ ಮಾತನಾಡಲು , ಹೊಸದನ್ನೇನಾದರೂ ಕಲಿಯಲು,ಅಥವಾ ಮಾರ್ಕೆಟಿಂಗ್ ಮಾಡಲು ಎಲ್ಲದಕ್ಕೂ ಕಾನ್ಫಿಡೆನ್ಸ್ ಬೇಕು ಈ ಕಾನ್ಫಿಡೆನ್ಸ್ ಬರುವುದು ನಾವು ಅದರೆಡೆಗೆ ಕಾರ್ಯೋನ್ಮುಖರಾದಾಗ ಅಂದರೆ ಒಂದು ಸಣ್ಣ ಆಕ್ಷನ್ ಅದರೆಡೆಗೆ ತೆಗೆದುಕೊಂಡರು ನಮ್ಮ ಕಾನ್ಫಿಡೆನ್ಸ್ ಮೊದಲಿಗಿಂತ ಹೆಚ್ಚಾಗುತ್ತದೆ
(NO)ಇಲ್ಲ ಎಂದು ಹೇಳುವುದನ್ನು ಕಲಿಯಿರಿ …!!!
ಸಾಕಷ್ಟು ಜನರಿಗೆ ಇಲ್ಲ ಎಂದು ಹೇಳಲು ಬರುವುದೇ ಇಲ್ಲ ಉದಾಹರಣೆಗೆ ನಾನು ಉದಯ್ ಬಿಸಿನೆಸ್ ಟೈಕೂನ್ ಅಕಾಡೆಮಿ ಸ್ಟೂಡೆಂಟ್ ರವರ ಬಳಿ ಮಾತನಾಡುತ್ತಿದ್ದೆ ಅವರು ಸತ್ಯ ನಾನು ಸುಮಾರು 20 ವರ್ಷಗಳಿಂದ ಬಿಸಿನೆಸ್ ಮಾಡುತಿದ್ದೇನೆ ಆದರೆ ನಾನು ಅಷ್ಟಾಗಿ ಹಣ ಉಳಿಸಲು ಆಗಲಿಲ್ಲ ಏಕೆಂದರೆ ನನ್ನ ಬಳಿ ಯಾವಾಗ ಹೆಚ್ಚಿನ ಹಣ ಬಂದರು ಯಾರಾದರೂ ಬಂದು ಕೇಳುತ್ತಾರೆ ಮತ್ತು ನಾನು ಅದನ್ನು ಕೊಟ್ಟುಬಿಡುತ್ತೇನೆ ಹೀಗೆ ಸಾಕಷ್ಟು ಜನ ನೆಂಟರು , ಸ್ನೇಹಿತರು ನನಗೆ ಹಣ ಕೊಡಬೇಕು ಆದರೆ ನನಗೆ ಹಣ ಹಿಂತಿರುಗಿಸಿ ಎಂದು ಹೇಳಲು ಆಗುತ್ತಿಲ್ಲ . ನಿಮಗೂ ಅನ್ನಿಸಿರಬಹುದು ನಾನು ಇದೆ ರೀತಿ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಮೊದಲನೆಯದಾಗಿ ನಮ್ಮ ಅನುಮತಿ ಇಲ್ಲದೆ ಯಾರು ನಮ್ಮ ಹಣ ನಮ್ಮಿಂದ ತೆಗೆದು ಕೊಳ್ಳಲು ಆಗುವುದಿಲ್ಲ ಅಂದರೆ ಅವರು ಕೇಳಿದಾಗ ನಮಗೆ ಇಲ್ಲ ಎಂದು ಹೇಳಲಾಗುವುದಿಲ್ಲ , ಇದು ಇಲ್ಲಿ ಮಾತ್ರವಲ್ಲ ನಮ್ಮ ಉದ್ಯೋಗಿಗಳು ಲೇಟಾಗಿ ಆಫೀಸ್ ಗೆ ಬರುತಿದ್ದರು ನಮಗೆ ಹೀಗೆ ಮಾಡಬಾರದು ಎಂದು ಹೇಳಲು ಆಗುವುದಿಲ್ಲ, ಸಂಬಳದಲ್ಲಿ ಅಡ್ವಾನ್ಸ್ ಕೊಡಿ ಎಂದು ಕೇಳಿದಾಗ ಎಷ್ಟೋ ಬರಿ ಅನ್ನಿಸಿರುತ್ತದೆ ಈತ ಸುಮ್ಮನೆ ಕೇಳುತಿದ್ದಾನೆ ಅವನಿಗೆ ನಿಜವಾದ ಅವಶ್ಯಕತೆ ಇಲ್ಲ ಎಂದು ಆದರೂ ಇಲ್ಲ ಎಂದು ಹೇಳಲಾಗುವುದಿಲ್ಲ , ನಮ್ಮ ಕಾನ್ಫಿಡೆನ್ಸ್ ಹೆಚ್ಚಾಗಬೇಕೆಂದರೆ ಇಲ್ಲ (ನೋ) ಎಂದು ಸ್ಪಷ್ಟವಾಗಿ ಹೇಳುವುದನ್ನು ಕಲಿಯಬೇಕು ಯಾವುದೇ ಮುಜುಗರವಿಲ್ಲದೆ, ಯಾವುದೇ ಹೆಚ್ಚಿನ ವಿವರಣೆ ನೀಡದೆ ಇಲ್ಲ ಎಂದು ಹೇಳುವುದು ಖಂಡಿತ ನಮ್ಮ ಕಾನ್ಫಿಡೆನ್ಸ್ ಹೆಚ್ಚಿಸುತ್ತದೆ…
ಸಪೋರ್ಟ್ ಸಿಸ್ಟಮ್ ಮಾಡಿ ಕೊಳ್ಳಿ
ಬಿಸಿನೆಸ್ ನಲ್ಲಿ ಇದ್ದು ಸಾಕಷ್ಟು ಜನ ಬಹಳ ಟಾಲೆಂಟೆಡ್ ಆಗಿದ್ದರು ಬಿಸಿನೆಸ್ ಅನ್ನು ಅವರು ದೊಡ್ಡದಾಗಿ ಬೆಳೆಸುವುದಿಲ್ಲ ಕಾರಣ ದೊಡ್ಡದಾಗಿ ಬಿಸಿನೆಸ್ ಬೆಳೆಸಿದರೆ ಯಾವ ಯಾವ ಸಮಸ್ಯೆ ಬರುತ್ತದೆಯೋ ಅದನ್ನು ಸರಿಪಡಿಸುವುದು ಹೇಗೋ ಅಷ್ಟೆಲ್ಲ ರಿಸ್ಕ್ ಯಾಕೆ ಬೇಕು ಹೀಗೆ ಯೋಚಿಸುವವರೇ ಹೆಚ್ಚು , ನಾವು ಜೀವನದಲ್ಲಿ ಬೆಳೆಯುತ್ತಿದ್ದಂತೆ ನಮಗೆ ಸಮಸ್ಯೆ ಕೊಡುವವರು ಹೆಚ್ಚುತ್ತಾರೆ ನಮ್ಮ ಕಾನ್ಫಿಡೆನ್ಸ್ ಅನ್ನು ನಾವು ಬೆಳೆಸಿಕೊಳ್ಳಬೇಕು ಕೆಲವೊಮ್ಮೆ ಹಣದಿಂದ ಎಲ್ಲ ಸಮಸ್ಯೆ ಬಗೆಹರಿಸಲಾಗುವುದಿಲ್ಲ , ನಿಮ್ಮ ಏರಿಯಾ ದಲ್ಲಿ ಇರುವ ಪೊಲೀಸ್ , ಒಬ್ಬ ರಾಜಕಾರಣಿ, ಫ್ಯಾಮಿಲಿ ಡಾಕ್ಟರ್, ಚಾರ್ಟೆಡ್ ಅಕೌಂಟೆಂಟ್ , ಮತ್ತು ಒಬ್ಬ ಒಳ್ಳೆ ಸ್ನೇಹಿತ ಇಷ್ಟು ಜನ ನಮ್ಮ ಸುಪ್ಪೋರ್ಟ ಸಿಸ್ಟಮ್ ಯಾವಾಗ ನಾವು ಒಂದು ಕಾಲ್ ಮಾಡಿದರು ನಮ್ಮ ಬಳಿ ಅವರು ಮಾತನಾಡುವಂತಿರಬೇಕು ಆಗ ನಮ್ಮ ಬಿಸಿನೆಸ್ ಜೊತೆಗೆ ನಮ್ಮ ಕಾನ್ಫಿಡೆನ್ಸ್ ಕೂಡ ಬೆಳೆಯುತ್ತದೆ .
ನಿಮ್ಮ ಗುರಿ ಗಳನ್ನೂ ನೋಡಿ
ಕೆಲವೊಮ್ಮೆ ನಾವು ಇನ್ನು ಪ್ರಾರಂಭಿಕ ಹಂತದಲ್ಲಿದ್ದಾಗ ನಾವು ಇನ್ನು ಅಷ್ಟೇನು ರಿಸಲ್ಟ್ ತೋರಿಸದಿದ್ದಾಗ ನಮ್ಮ ಗುರಿ ಗಳಲ್ಲಿ ನಾವು ಇಟ್ಟಿರುವ ನಂಬಿಕೆ ನಮಗೆ ಕಾನ್ಫಿಡೆನ್ಸ್ ತರುತ್ತದೆ
ಪ್ರಪಂಚಕೆಲ್ಲ ನಾವು ನಮ್ಮ ಗುರಿ ಮುಟ್ಟಿದ ಮೇಲೆ ಕಾಣಿಸುತ್ತೇವೆ ಆದರೆ ಗುರಿ ಮುಟ್ಟುವ ಮುಂಚೆಯೇ ಅದನ್ನು ನಾವು ಮಾತ್ರ ನೋಡಲು ಸಾಧ್ಯ ಯಾರಿಗೂ ಕಾಣದ ಭವಿಷ್ಯ ನಮಗೆ ಕಂಡಾಗ ನಮ್ಮ ಕಾನ್ಫಿಡೆನ್ಸ್ ಹೆಚ್ಚುತ್ತದೆ.
ನಮ್ಮ ಇನ್-ಪುಟ್
ನಮ್ಮ ಮನಸ್ಸು ಅತೀ ಸೂಕ್ಷ್ಮ ಅಂದರೆ ನಾವು ಏನನ್ನು ನೋಡುತ್ತೇವೆ ,ಕೇಳುತ್ತೇವೆ, ಎಲ್ಲವನ್ನು ಅದು ಸಬ್-ಕಾನ್ಶಿಯಸ್ ಮೈಂಡ್ ಗೆ ಕಳಿಸುತ್ತದೆ ,ಎಷ್ಟೋ ಬಾರಿ ನಾವು ತುಂಬಾ ಇಂಟೆನ್ಸಿಟಿ (ನಮ್ಮ ಗಮನವೆಲ್ಲ ) ಇಟ್ಟು ಸಿನಿಮಾ , ನ್ಯೂಸ್
,ಸೀರಿಯಲ್ ನೋಡುತ್ತೇವೆ ಇದು ನಮ್ಮ ಮೇಲೆ ಹೆಚ್ಚಿನ ಪರಿಣಾಮಬೀರುತ್ತದೆ , ನಿಮ್ಮ ಮನಸ್ಸಿಗೆ ಏನು ಹೋಗಬೇಕೆಂದು ನೀವು ನಿರ್ಧರಿಸಬೇಕು , ಜೊತೆಗೆ ಸ್ಪೂರ್ತಿದಾಯಕ ಸಿನಿಮಾ , ಯಶಸ್ವಿ ವ್ಯಕ್ತಿಗಳ ಆತ್ಮಚರಿತ್ರೆ ಸಿನಿಮಾ ಗಳನ್ನೂ ನೋಡುವುದು ನಮ್ಮ ಆತ್ಮ ಬಲ ಹೆಚ್ಚುತ್ತದೆ .
ಸೋಲುವುದನ್ನು ಕಲಿಯಿರಿ
ಯಾರು ಹೆಚ್ಚು ಸೋಲುತ್ತಾರೋ ಅವರಿಗೆ ಹೆಚ್ಚು ಕಾನ್ಫಿಡೆನ್ಸ್ ಬರುತ್ತಹೋಗುತ್ತದೆ, ನಮ್ಮ ಜೀವನದಲ್ಲಿ ಗೆಲುವಿಗಿಂತ ಸೋಲೇ ಹೆಚ್ಚಿರುತ್ತದೆ ಅಂದರೆ ಪ್ರಯತ್ನ ಪ್ರತಿದಿನ ಪಡುತ್ತೇವೆ ಗೆಲುವು ಯಾವಾಗಲಾದರೂ ಒಂದು ಬರಿ ಬರುತ್ತದೆ ಆದರೆ ಸೋಲು ಪ್ರತಿದಿನ ನಮ್ಮ ಜೊತೆಯಲ್ಲೇ ಇರುತ್ತದೆ , ಯಾರು ಸೋಲನ್ನು ಕಲಿಕೆಯಾಗಿ ಸ್ವೀಕರಿಸುತ್ತಾರೋ ಅವರಿಗೆ ಕಾಂಫಿಡೇನ್ಸ ಹೆಚ್ಚಾಗುತ್ತದೆ.