ಗುರಿ ಸಾದಿಸಲು ಬೇಕಾದ 3 ಮೆಟ್ಟಿಲು

ಗುರಿ ಸಾಧಿಸಲು ಬೇಕಾದ 3 ಹಂತಗಳು

ಗುರಿ ಸಾಧಿಸಲು ಬೇಕಾದ 3 ಮೆಟ್ಟಿಲು

ಯಾರೇ ವ್ಯಕ್ತಿ ತನ್ನ ಜೀವನದಲ್ಲಿ ಅಭಿವೃದ್ಧಿ ಯಾಗಬೇಕಾದಲ್ಲಿ ಸಾಕಷ್ಟು ಅಂಶಗಳು ಕಾರಣವಾಗಿರುತ್ತವೆ , ಹಾಗೆ ನಾವು ಜೀವನದಲ್ಲಿ ಬೆಳೆಯಲು ಪ್ರಾರಂಭವಾಗುವುದೇ ನಮ್ಮ ಗುರಿಗಳನ್ನು ನಾವು ನಿರ್ಧರಿಸಿದ ದಿನ ಅಂದರೆ ನಾನು ನನ್ನ ಜೀವನದಲ್ಲಿ ಒಂದು ದಿನ ಹೀಗೆಯೇ ಖಂಡಿತವಾಗಿ ಆಗುತ್ತೇನೆ ಅಂದುಕೊಳ್ಳುವುದು ಅಥವಾ ನನ್ನ ಜೀವನ ಹೀಗೆಯೇ ಇರುತ್ತದೆ ಅಂತ ನಿರ್ಧರಿಸಿ ಅದರೆಡೆಗೆ ಕಾರ್ಯನಿರತರಾಗುವುದು .

ಎಲ್ಲಿಂದ ಪ್ರಾರಂಭ

ಹಾಗಾದರೆ ಗುರಿಗಳು ನಮ್ಮ ಜಿವನವನ್ನು ಬದಲಿಸುತ್ತದೆ ಎಂದಾದರೆ ಎಲ್ಲಿಂದ ಗುರಿಗಳನ್ನು ಪ್ರಾರಂಭಿಸಬೇಕು .

ಗುರಿಗಳು ಪ್ರಾರಂಭವಾಗುವುದು ಕನಸಿನಿಂದ , ಕನಸಿಲ್ಲದ ವ್ಯಕ್ತಿಯೇ ಇಲ್ಲ ಅದು ಸಣ್ಣ ಕನಸಾಗಿರಬಹುದು ಅಥವಾ ದೊಡ್ಡ ಕನಸಾಗಿರಬಹುದು , ಯಾವಾಗ ಕನಸಿಗೆ ನಾವು ನಿರ್ದಿಷ್ಟ ಸಮಯ ನಿಗದಿ ಮಾಡಿ ಬರಿ ಕನಸನ್ನು ಕಾಣದೆ ಅದರೆಡೆಗೆ ಪ್ಲಾನ್ ಮಾಡಿ ಮುಂದುವರಿದರೆ ಅದು ಗುರಿ ತಲುಪಲು ಮೊದಲ ಮೆಟ್ಟಿಲು ಏರಿದಂತೆ.

ಕನಸನ್ನು ಗುರಿಯಾಗಿ ಪರಿವರ್ತಿಸುವುದು ಹೇಗೆ ??

ಎಲ್ಲರಲ್ಲೂ ಕನಸಿದೆ ಎಂದಾದಮೇಲೆ ಏಕೆ ಎಲ್ಲರ ಕನಸು ನನಸಾಗುವುದಿಲ್ಲ ಕೆಲವರ ಕನಸುಗಳು ಮಾತ್ರ ನನಸಾಗುತ್ತವೆ , ಇದಕ್ಕೆ ಕಾರಣ ಸಾಕಷ್ಟು ಜನ ಕನಸನ್ನು ಕಾಣುತ್ತಾರೆ ಆದರೆ ನಿರ್ದಿಷ್ಟವಾಗಿರುವುದಿಲ್ಲ ಅಂದರೆ ನಾನು ಸಂತೋಷವಾದ ಜೀವನ ನಡೆಸಬೇಕು ಎಂದು ಕನಸುಕಾಣುತ್ತಾರೆ ಅಂದರೆ ಸಂತೋಷ ಎನ್ನುವುದು ಹೇಗೆ ನಾನು ಪಡೆಯುತ್ತೇನೆ ಎಂದು ಡಿಫೈನ್ ಮಾಡಬೇಕು , ನಾನು ದೊಡ್ಡ ಬಿಸಿನೆಸ್ ಮ್ಯಾನ್ ಆಗುತ್ತೇನೆ ಎಂದು ಕನಸು ಕಾಣುವುದಕ್ಕಿಂತ ನಾನು ಸೋಲಾರ್ ಇಂಡಸ್ಟ್ರಿ ಯಲ್ಲಿ ವರ್ಷಕ್ಕೆ ಒಂದು ಕೋಟಿ ಲಾಭ ಗಳಿಸಿ ಸೋಲಾರ್ ಇಂಡಸ್ಟ್ರಿ ಯಲ್ಲಿ ಮೊದಲ ಸ್ಥಾನಕ್ಕೆ ಏರುತ್ತೇನೆ ಎಂದು ಕನಸನ್ನು ನಿರ್ದಿಷ್ಟವಾಗಿಸಿ ಗುರಿಗಳಾಗಿ ಪರಿವರ್ತಿಸಬಹುದು , ಇದು ನಮಗೆ ನಮ್ಮ ಕನಸಿನ ಮೇಲೆ ಹೆಚ್ಚಿನ ಹಿಡಿತ ಕೊಡುತ್ತದೆ .

ಸ್ಪಷ್ಟ ಗುರಿಗಳು…….

ನಮ್ಮ ಗುರಿಗಳು ಸ್ಪಷ್ಟ ವಾಗಿದ್ದರೆ ನಮ್ಮ ಗುರಿಗಳ ಮೇಲೆ ನಮ್ಮ ಭರವಸೆ ಹೆಚ್ಚಾಗುತ್ತದೆ , ಎಷ್ಟೋ ಬಾರಿ ನಾವು ನಮ್ಮ ಸ್ಪಷ್ಟ ಗುರಿಗಳನ್ನು ಬೇರೆಯವರಿಗೆ ಹೇಳಿದಾಗ ನಮಗೆ ಗೊತ್ತಿಲ್ಲದೆ ನಮ್ಮ ಗುರಿಗಳನ್ನು ಸಾಧಿಸಲು ದಾರಿಗಳು ಕಾಣಿಸುತ್ತವೆ ನಾನು ಕನ್ಸೂಮರ್ ವರ್ಲ್ಡ್ ಡೈರೆಕ್ಟ್ ಮಾರ್ಕೆಟಿಂಗ್ ಕಂಪನಿ ಪ್ರಾರಂಭಿಸಿದಾಗ ನನಗೆ ಡೈರೆಕ್ಟ್ ಮಾರ್ಕೆಟಿಂಗ್ ಬಗ್ಗೆ ಏನು ತಿಳಿದಿರಲಿಲ್ಲ ಆದರೆ ನಾನು ನನ್ನ ಕನಸನ್ನು ನಿರ್ದಿಷ್ಟ ಮಾಡಿ ಗುರಿಯಾಗಿಸಿದೆ ಅಂದರೆ ಕಂಪನಿ ಪ್ರಾರಂಭಿಸಿದ ಸ್ವಲ್ಪ ದಿನಗಳಲ್ಲೇ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೆ ನಾನು ನನ್ನ ನಿರ್ದಿಷ್ಟ ಗುರಿಗಳನ್ನು ಆಗಾಗ ಹೇಳುತಿದ್ದೆ ನಾನು ಎಪ್ಪತ್ತು ಬ್ರಾಂಚ್ ಮಾಡುತ್ತೇನೆ ಎಂದು ಇದನ್ನು ಕೇಳಿ ಸಾಕಷ್ಟು ಹೊಸಬರು ಹೇಳತೊಡಗಿದರು ಸರ್ ನಾನು ಅದರಲ್ಲಿ ಒಬ್ಬ ಬ್ರಾಂಚ್ ಮ್ಯಾನೇಜರ್ ಆಗುತ್ತೇನೆ ಎಂದು ಹೀಗೆ ನನ್ನ ಗುರಿ ಇದ್ದದ್ದು ಎಪ್ಪತ್ತು ಆದರೆ ನಾವು ಐವತ್ತು ಬ್ರಾಂಚ್ ತೆರೆದೆವು ಇದು ಸಾಧ್ಯವಾದುದ್ದು ಸ್ಪಷ್ಟ ಗುರಿಗಳಿಂದ ಜನರಿಗೆ ಆತ್ಮವಿಶ್ವಾಸ ಬರುತ್ತದೆ .

ಗುರಿ ಸಾದಿಸಲು ಬೇಕಾದ ಸಂಪನ್ಮೂಲ……!!!!!!

ನಿರ್ದಿಷ್ಟ ,ಸ್ಪಷ್ಟ ಗುರಿಯೊಂದಿಗೆ ನಮ್ಮಲ್ಲಿ ಗುರಿಸಾಧಿಸಲು ಬೇಕಾಗಿರುವ ಸಂಪನ್ಮೂಲ ವೇನು ಎಂದು ತಿಳಿಯುವುದು ಅಗತ್ಯ , ಸಾಕಷ್ಟು ಬಾರಿ ಗುರಿಗಳನ್ನು ಬರೆದ ಮೇಲೆ ಅದಕ್ಕೆ ಬೇಕಿರುವ ಸಂಪನ್ಮೂಲ ಗುರುತಿಸಿ ಅದನ್ನು ಲಿಸ್ಟ್ ಮಾಡಿ ನಿಮ್ಮ ಬಳಿ ಆ ಸಂಪನ್ಮೂಲಗಳಿವೆಯೇ ಇಲ್ಲವೆಂದರೆ ಅದನ್ನು ಹೇಗೆ ಪಡೆಯಬೇಕು ಎಂದು ಯೋಚಿಸಿ ,ನಾನು ಇಪ್ಪತ್ತು ಬ್ರಾಂಚ್ ತೆರೆಯಬೇಕು ಎಂದು ಗುರಿ ಇಟ್ಟಾಗ ನನ್ನ ಬಳಿ ಪ್ರಾಡಕ್ಟ್ , ಕಂಪನಿ ನಡೆಸಲು ಬೇಕಾದ ಅರಿವು, ಜನರನ್ನು ಹೇಗೆ ಬೆಳೆಸಬೇಕೆಂಬ ಅರಿವು ನನಗಿರಲಿಲ್ಲ ನನ್ನ ಗುರಿ ತಲುಪಲು ನನಗೆ ಬೇಕಾದ ಅತಿ ಮುಖ್ಯ ಸಂಪನ್ಮೂಲಗಳು ನಾನು ಅದನ್ನು ಅರಿತು ಒಂದು ಪರ್ಸನಾಲಿಟಿ ಡೆವಲಪ್ಮೆಂಟ್ ಕೋರ್ಸ್ ಸೇರಿದೆ ಅಲ್ಲಿ ನನ್ನ ಕನಸನ್ನು ಗುರಿ ಗಳನ್ನಾಗಿಸುವುದನ್ನು ಕಲಿತೆ ಜೊತೆಗೆ ಕಮ್ಯುನಿಕೇಷನ್ , ಜನರನ್ನು ಗೆಲ್ಲುವ ಬಗ್ಗೆ ಕಲಿತೆ ಹೀಗೆ ಸಂಪನ್ಮೂಲಗಳನ್ನು ಜೊತೆಮಾಡಿ ಗುರಿ ಸಾಧಿಸಿದೆ ನೀವು ನಿಮ್ಮ ಕನಸನ್ನು ಗುರಿಯಾಗಿಸಿ ಅದನ್ನು ನಿರ್ದಿಷ್ಟವಾಗಿಸಿ , ಸಂಪನ್ಮೂಲಗಳನ್ನು ಜೊತೆಗೂಡಿಸಿ ಗುರಿಗಳಬಗ್ಗೆ ಯೋಚಿಸಿ ನೊಮ್ಮ ಗುರಿ ತಲುಪುವುದು ಖಂಡಿತ .

 

Similar Posts