ಬಿಸಿನೆಸ್ ಪಾಪ್ ಕಾರ್ನ್ ಥಿಯರಿ … !!!!

ಬಿಸಿನೆಸ್ ಪಾಪ್ ಕಾರ್ನ್ ಥಿಯರಿ

Business Popcorn Theoryನನ್ನ 22 ವರ್ಷಗಳ ಬಿಸಿನೆಸ್ ,ಕೋಚಿಂಗ್ ಲೈಫ್ ನಲ್ಲಿ ನಾನು ಸಾಕಷ್ಟು ಯಶಸ್ಸು ಮತ್ತು ಸೋಲುಗಳನ್ನು ಕಂಡಿದ್ದೇನೆ ಹಾಗೆ ನನ್ನ ಜೊತೆ ಕೆಲಸ ಮಾಡುತ್ತಿದ್ದ ಹಾಗು ಮಾಡುತ್ತಿರುವವರು ಮತ್ತು ನನ್ನ ಬಿಸಿನೆಸ್ ಟೈಕೂನ್ ಅಕಾಡೆಮಿ ಯಲ್ಲಿನ ಬಿಸಿನೆಸ್ ಓನರ್ ಗಳ ಬಳಿ ಸಾವಿರಾರು ಗಂಟೆ ಗಳು ನಾನು ಸಮಯ ಕಳೆದಿದ್ದೇನೆ ಅವರ ಸಮಸ್ಯೆ ಗಳನ್ನು ಆಲಿಸುತ್ತ ಅವರ ಸಮಸ್ಯೆ ಗಳಿಗೆ ಕೆಲವೊಮ್ಮೆ ಸಮಾಧಾನ ,ಕೆಲವೊಮ್ಮೆ ಉತ್ತರ , ಇನ್ನು ಕೆಲವು ಬರಿ ಕೇವಲ ಕೇಳಿಸಿಕೊಳ್ಳುವುದರಿಂದ ಅವರ ಸಮಸ್ಯೆ ಪರಿಹಾರವಾಗವುದನ್ನ ನೋಡಿದ್ದೇನೆ !!!!

ಹೀಗೆ ಒಮ್ಮೆ ನನ್ನ ಮ್ಯಾನೇಜರ್ ಒಬ್ಬರು ಸುಮಾರು 2 ವರ್ಷಗಳಿಂದ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನು ಒಂದು ದಿನ ಸತ್ಯ ಸರ್ ನನಗೆ ತುಂಬಾ ಬೇಸರವಾಗಿದೆ ನಾನು ಎರಡು ವರ್ಷಗಳಿಂದ ಎಫರ್ಟ್ ಹಾಕುತ್ತಿದ್ದೇನೆ ಆದರೆ ನನ್ನ ಟೀಮ್ ಒಂದು ಮಟ್ಟಿಗೆ ಬೆಳೆಯುತ್ತದೆ ಮತ್ತೆ ಒಂದಷ್ಟು ಜನ ಕಂಪನಿ ಬಿಟ್ಟು ಹೊರಟುಹೋಗುತ್ತಾರೆ ಎಷ್ಟು ಬಾರಿ ಹೀಗೆ ಆಗುತ್ತಿದೆ ನಾನು ನನ್ನ ಜೊತೆಯಲ್ಲಿ ಹತ್ತು ಜನ ಹುಡುಗರಿಗೆ ಮ್ಯಾನೇಜರ್ ಆಗಿ ಪ್ರಮೋಷನ್ ಕೊಟ್ಟು ನಾನು ಪ್ರೋಮೊಟಿಂಗ್ ಮ್ಯಾನೇಜರ್ ಆಗಬೇಕು ಎಂದು ಕನಸು ಕಂಡಿದ್ದೇನೆ ಆದರೆ ನನ್ನ ಟೀಮ್ ನಲ್ಲಿ ಯಾರು ಅಷ್ಟು ಸಮರ್ಥ ಹುಡುಗರು ಕಾಣುತಿಲ್ಲ, ಯಾವಾಗ ನನ್ನ ಕನಸು ಈಡೇರುತ್ತದೋ ತಿಳಿದಿಲ್ಲ , ಇದನ್ನು ಕೇಳಿ ನಾನು ಸ್ವಲ್ಪ ಯೋಚಿಸ ತೊಡಗಿದೆ ಹೇಗೆ ಇವನಿಗೆ ಅರ್ಥವಾಗುವಂತೆ ಮತ್ತು ಅವನ ಹುಮ್ಮಸ್ಸು ಮತ್ತೆ ಹೊರ ಬರುವಂತೆ ಹೇಗೆ ಮಾಡುವುದು ಎಂದು.

ಅದೇ ದಿನ ಸಂಜೆ ನಾನು ನನ್ನ ಮಕ್ಕಳು ಹೆಂಡತಿಯೊಂದಿಗೆ ಸಿನಿಮಾ ನೋಡಲು ಹೋಗಿದ್ದೆ ಆಗ ನನ್ನ ಗಮನ ಪಾಪ್-ಕಾರ್ನ್ ಮೇಲೆ ಹೋಯಿತು ಹಾಗೆ ಸ್ವಲ್ಪ ಹೊತ್ತು ನಾನು ಪಾಪ್-ಕಾರ್ನ್ ಆಗುವುದನ್ನು ನೋಡುತಿದ್ದೆ, ಮೊದಲು ಪಾಪ್-ಕಾರ್ನ್ ಮಷಿನನ್ನು ಬಿಸಿ ಮಾಡಿ ನಂತರ ಅದಕ್ಕೆ ಪಾಪ್-ಕಾರ್ನ್ ಹಾಕಿ ಉಪ್ಪು,ಎಣ್ಣೆ ಸೇರಿಸುತ್ತಿದ್ದರು ಸ್ವಲ್ಪ ಹೊತ್ತಿನ ನಂತರ ಪಾಪ್-ಕಾರ್ನ್ ಒಂದೊಂದಾಗಿ ಒಡೆದು ಮೇಲೆ ಬಂತು ಕೆಲವು ಸ್ವಲ್ಪ ಹೊತ್ತು ತೆಗೆದುಕೊಂಡಿತು ಇನ್ನು ಕೆಲವಂತೂ ಒಡೆಯಲೇ ಇಲ್ಲ ಆದರೆ ಒಡೆಯದಿದ್ದ ಜೋಳ, ಪಾಪ್-ಕಾರ್ನ್ ತಳವಿಡಿದು ಸೀದುಹೋಗದಂತೆ ಮಾಡುತಿತ್ತು .

ಮರುದಿನ ನಾನು ಅದೇ ಮ್ಯಾನೇಜರ್ ನನ್ನ ಭೇಟಿ ಮಾಡಿ ಮಾತನಾಡುತ್ತ ನೋಡು , ಬಿಸಿನೆಸ್ ಪಾಪ್-ಕಾರ್ನ್ ಇದ್ದಂತೆ , ಮೊದಲು ಪಾಪ್-ಕಾರ್ನ್ ಮಷೀನ್ ಬಿಸಿಯಾಗಬೇಕು ಅಂದರೆ ನಮ್ಮ ಬಳಿ ಬರುವವರು ಬಿಸಿಯಾಗಬೇಕು ಅಂದರೆ ಅವರು ತಯಾರಾಗಬೇಕು ಅವರ ಮೈಂಡ್ ,ಕಂಪನಿಯ ಮೌಲ್ಯಗಳನ್ನ ಅವರು ತಿಳಿಯಬೇಕು ನಂತರ ಅವರು ಬಿಸಿಯಾದ ಮೇಲೆ ಪಾಪ್-ಕಾರ್ನ್ ಹೇಗೆ ಅದೇ ಹೊಡೆದು ಹೊರಬರುತ್ತದೆಯೋ ಹಾಗೆ ಅವರೇ ಮುಂದೆ ಬರುತ್ತಾರೆ ಮತ್ತು ಎಲ್ಲರು ಮ್ಯಾನೇಜರ್ ಆಗುವುದಿಲ್ಲ ಅದ್ರಲ್ಲಿ ಕೆಲವರು ಒಡೆಯದ ಪಾಪ್-ಕಾರ್ನ್ ಗಳಂತೆ ಹಾಗೆ ಉಳಿಯುತ್ತಾರೆ ಆದರೆ ನಮಗೆ ಬಿಸಿನೆಸ್ ನಲ್ಲಿ ಅವರು ಕೂಡ ಮುಖ್ಯ ಏಕೆಂದರೆ ಜನರಿದ್ದೆಡೆ ಹೆಚ್ಚು ಜನ ಸೇರುತ್ತಾರೆ ಹಾಗೆ ನಮ್ಮಲಿ ಹತ್ತು ಜನರಿದ್ದಾರೆ ಎಂದಾದರೆ ಅವರಲ್ಲಿ 27% ಜನ ಯಶಸ್ಸನ್ನು ನೋಡುವುದೇ ಇಲ್ಲ , ಇನ್ನು 60% ಜನ ಆವರೇಜ್ ಯಶಸ್ಸು ಪಡೆಯುತ್ತಾರೆ ,10% ಜನ ತಾವು ಅಂದುಕೊಂಡಂತೆ ಯಶಸ್ವೀ ಯಾಗುತ್ತಾರೆ “ಆದರೆ” 3% ಜನ ಮಾತ್ರ ತಾವು ಅಂದುಕೊಂಡದ್ದಕ್ಕಿಂತ ಯಶಸ್ಸು ಪಡೆಯುತ್ತಾರೆ , ನಾವು ಬಿಸಿನೆಸ್ ನಡೆಸಲು ಮತ್ತು ಬಿಸಿನೆಸ್ ನಲ್ಲಿ ಬೆಳೆಯಲು ಎಲ್ಲರು ಅಗತ್ಯ ಎಲ್ಲರಿಗು ನಾವು ಅವಕಾಶ ಕೊಡಬೇಕು ಅವರೇ ಪಾಪ್-ಕಾರ್ನ್ ಥಿಯೊರಿ ಯಂತೆ ಅವರು ಒಳಗಿನಿಂದ ಸಿದ್ಧವಾದಾಗ ಒಡೆದು ಹೊರಬರುತ್ತಾರೆ , ನಮ್ಮ ಕೆಲಸ ಪಾಪ್-ಕಾರ್ನ್ ಮಷಿನನ್ನ ಬಿಸಿಮಾಡುವುದು.

ಇದು ನಮ್ಮ ಟೀಮ್ ಮಾತ್ರವಲ್ಲ ನಮ್ಮ ಗ್ರಾಹಕರಿಗೂ ಅನ್ವಯವಾಗುತ್ತದೆ , ಎಷ್ಟು ಸರಿ ಫಾಲೋ-ಅಪ್ ಮಾಡಿದರು ಕೆಲವು ಗ್ರಾಹಕರು ಪ್ರಾಡಕ್ಟ್ ಪಾರ್ಚಸ್ ಮಾಡುವುದಿಲ್ಲ , ಅವರಿಗೆ ಆ ಪ್ರಾಡಕ್ಟ್ ಅಗತ್ಯವಿಲ್ಲ ಎಂದಲ್ಲ ಆದರೆ ಅವರು ಇನ್ನು ರೆಡಿ ಯಾಗಿಲ್ಲ ಎಂದು ಅರ್ಥ ನಮ್ಮ ಕೆಲಸ ಅವರಿಗೆ ನಮ್ಮ ಪ್ರಾಡಕ್ಟ್ ಇದೆ ಎಂದು ನೆನಪಿಸಿ ಅದರ ಉಪಯುಕ್ತತೆ ಅದನ್ನು ಬಳಸಿದವರ ಅನುಭವ ಹೇಗಿದೆ ಎಂದು ತಿಳಿಸುವುದು , ಅವರು ಪಾಪ್-ಕಾರ್ನ್ ನಂತೆ ಒಳಗಿನಿಂದ ರೆಡಿ ಯಾದಾಗ ಅವರೇ ಬರುತ್ತಾರೆ ಆದರೆ ನಾವು ಬೇಸರ ಮಾಡಿಕೊಳ್ಳದೆ ನಿರಂತರವಾಗಿ ಅವರಿಗೆ ಪ್ರಾಡಕ್ಟ್ ಕೊಂಡುಕೊಳ್ಳಲು ಬೇಕಾದ ವಾತಾವರಣ ನಿರ್ಮಿಸುವುದು.

ಆಮೇಲೆ ನಿಮಗೆ ಆಶ್ಚರ್ಯ ವಾಗುತ್ತದೆ ಹೇಗೆ ಇಷ್ಟೊಂದು ಜನ ನನ್ನ ಗ್ರಾಹಕರಾದರು , ಇಷ್ಟು ದಿನ ಎಲ್ಲಿ ಇತ್ತು ಇಷ್ಟೊಂದು ಹಣ ಎಂದು ಒಂದನ್ನು ಮರೆಯದಿರಿ ಇದು ಒಂದು ದಿಂದ ಎಫರ್ಟ್ ಎಲ್ಲ ಅವರು ಬಹಳ ದಿನಗಳಿಂದ, ತಿಂಗಳುಗಳಿಂದ , ವರ್ಷಗಳಿಂದ ನಮ್ಮ ಬಳಿ ತಯಾರಾಗುತ್ತಿದ್ದರು .

Similar Posts