ಮೊದಲು ಯಶಸ್ಸು

ಯಶಸು ಮೊದಲು

2002 ಜನವರಿ 27 ಸಂಜೆ 4 ಗಂಟೆ , ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಟುಲಿಪ್ ರೆಸಾರ್ಟ್ಸ್ ನ ಸ್ಟೇಜ್ ಮೇಲೆ ನಿಂತಿದ್ದೆ ನನ್ನ ಮುಂದೆ 168 ಜನ ಯುವಕ ಯುವತಿಯರು ,ನನ್ನ ಮಾತನ್ನು ಕೇಳಲು ಕಾತುರದಿಂದ ಕುಳಿತಿದ್ದರು , ನನಗೆ ಆ ದಿನ ಮೊದಲ ಬಾರಿಗೆ ಯಶಸ್ಸಿನ ರುಚಿ ಹೇಗಿರುತ್ತದೆ ಎಂದು ತಿಳಿದ ದಿನ , ಒಂದು ಬಾರಿ ನನ್ನ 3 ವರ್ಷಗಳ ಜೀವನ ನನ್ನ ಕಣ್ಣ ಮುಂದೆ ಬಂದಿತ್ತು.
ಸ್ಕೂಲ್ ನಲ್ಲಿ ನನ್ನನ್ನು ಬಹಳ ಜನ ಸತ್ಯನಾರಾಯಣ ಎಂದು ಕರೆಯುತ್ತಿರಲಿಲ್ಲ ಬದಲಾಗಿ ಸೈಲೆಂಟ್ ನಾರಾಯಣ ಎಂದು ಕರೆಯುತಿದ್ದರು , ಬಹಳ ಸಂಕೋಚದ ಸ್ವಭಾವ ನನ್ನದು ,ನನ್ನ ವೃತ್ತಿ ಬದುಕು ಪ್ರಾರಂಭವಾಗಿದ್ದು ಮೊದಲು ಪ್ರಿಂಟಿಂಗ್ ಪ್ರೆಸ್ ನಿಂದ , ಪ್ರಿಂಟಿಂಗ್ ಪ್ರೆಸ್ ಪ್ರಾಂಭಿಸಿ ಹಗಲು ರಾತ್ರಿ ಎನ್ನದೆ ಕೆಲಸಮಾಡಿದೆ ನನ್ನ ಜೊತೆ ನಿಂತದ್ದು ನನ್ನ ಇಬ್ಬರು ತಮ್ಮಂದಿರು ಮತ್ತು ನನ್ನ ಕುಟುಂಬ, ಅಲ್ಲಿಂದ ನಾನು ಮಾರ್ಕೆಟಿಂಗ್ ಕಂಪನಿ ಪ್ರಾರಂಭಿಸಿದೆ,ಆಗ ನನಗೆ ಇಂಟರ್ ವ್ಯ್ ಮಾಡುವುದಾಗಲಿ , ಜನರನ್ನು ಹೇಗೆ ಮೋಟಿವೇಟ್ ಮಾಡಿ ಅವರನ್ನು ಬೆಳೆಸುವುದಾಗಲಿ , ಬಿಸಿನೆಸ್ ಸಿಸ್ಟಮ್ ಕ್ರಿಯೇಟ್ ಮಾಡುವುದಾಗಲಿ , ಯಾವುದು ತಿಳಿದಿರಲಿಲ್ಲ , 1000 ದಿನಗಳು ನಾನು ನನ್ನ ಪ್ರತಿ ಹಗಲು ,ರಾತ್ರಿ ,ಹಬ್ಬ ಹರಿದಿನ,ಭಾನುವಾರ ಯಾವುದನ್ನೂ ಲೆಕ್ಕಿಸದೆ ಬಿಸಿನೆಸ್ ನ ಮೇಲೆ ಪೂರ್ತಿ ಫೋಕಸ್ ಮಾಡಿದೆ ತಪಸ್ಸಿನಂತೆ ಪ್ರತಿ ಘಳಿಗೆಯು ಬಿಸಿನೆಸ್ ಬಗ್ಗೆ ಯೋಚಿಸುತ್ತಿದ್ದೆ , ಸಂಪೂರ್ಣವಾಗಿ ನನ್ನನ್ನು ನಾನು ಬಿಸಿನೆಸ್ ಕಲಿಯಲು ಮುಡುಪಿಟ್ಟೆ , ನಾನು ಮಾಡಿದ ಪ್ರತಿಯೊಂದು ಕೆಲಸವೂ ನಾನು ಬಿಸಿನೆಸ್ ನಲ್ಲಿ ಕಳೆದ ಪ್ರತಿಯೊಂದು ನಿಮಿಷವೂ ನನಗೆ ಆ ದಿನ ನನಗೆ ಗೆಲುವನ್ನು ತಂದಿತು ,ಈ ಗೆಲುವಿನ ಹಿಂದೆ ಸಾಕಷ್ಟು ಜನರ ಹಾರ್ಡ್ ವರ್ಕ್, ಸಮಯ, ಕಲಿಕೆ,ಅವರ ನಂಬಿಕೆ ಇತ್ತು, ಅಂದು ನಾನು ಸ್ಟೇಜ್ ಮೇಲೆ ನಿಂತು ನನ್ನ ಕಂಪನಿಯ ಎಲ್ಲ ಸಹೋದ್ಯೋಗಿಗಳನ್ನು , ನನ್ನ ಫ್ಯಾಮಿಲಿ, ನನ್ನ ತಮ್ಮಂದಿರನ್ನು ನೋಡಿದಾಗ ಒಂದು ರೀತಿಯ ಸಾರ್ಥಕ ಭಾವ, ಎಲ್ಲರ ಮೇಲು ಕೃತಜ್ಞತಾ ಭಾವದ ಜೊತೆಗೆ ಯಶಸ್ಸಿನ ಜೊತೆ ಒಂದು ಜವಾಬ್ಧಾರಿ ಬಂದಿದೆ ಎಂದೆನ್ನಿಸಿತ್ತು .
ನಿಜ ಸೇಹಿತರೆ ಯಶಸ್ಸು ನಮಗೆ ಸಂತೋಷ,ಕೃತಜ್ಞತೆ,ಜವಾಬ್ದಾರಿ ಎಲ್ಲವನ್ನೂ ತರಬೇಕು ಆಗ ಯಶಸ್ಸು ನಿರಂತರವಾಗಿರಲು ಅನುವು ಮಾಡಿದಂತಾಗುತ್ತದೆ .
ನಿಮ್ಮ ಜೀವನದ ಮೊದಲ ಯಶಸ್ಸಿನ ಆ ದಿನ ನೆನಪಿಸಿಕೊಳ್ಳಿ , ಈ ಭಾವನೆ ಗಳನ್ನು ಮತ್ತೆ ಅನುಭವಿಸಿ ,ನಿಮ್ಮ ಮುಂದಿನ ಗುರಿ ತಲುಪಲು ಇದು ಒಂದು ಇಂಧನದಂತೆ ಕೆಲಸ ಮಾಡುತ್ತದೆ ಜೊತೆಗೆ ನಿಮ್ಮ ಬಿಸಿನೆಸ್ ನಲ್ಲಿ ಯಶಸ್ಸು ಪಡೆದ ಮೊದಲ ಅನುಭವ ಕಾಂಮೆಂಟ್ನಲ್ಲಿ ಹಂಚಿಕೊಳ್ಳಿ ಮತ್ತು ಬೇರೆಯವರೊಡನೆ ಶೇರ್ ಮಾಡಲು ಮರೆಯಬೇಡಿ.

Similar Posts