ಸಮಸ್ಯೆ ಗಳನ್ನೂ ಎದುರಿಸುವುದು
ಸಮಸ್ಯೆ ಎದರುಸುವುದು
ಬಿಸಿನೆಸ್ ಕಷ್ಟದ ಸಮಯದಲ್ಲಿ ಬಿಸಿನೆಸ್ ಬೆಳೆಸಲು ಬೇಕಾದ ಅತಿ ಮುಖ್ಯ ವಿಚಾರ
-2020 ಪ್ರಪಂಚದಾದ್ಯಂತ ಎಲ್ಲ ದೇಶಗಳಿಗೂ ಎಲ್ಲ ಜನರಿಗೂ ಕಷ್ಟವನ್ನು ತಂದುಕೊಟ್ಟಂತಹ ವರ್ಷ , ಕರೋನ ಪ್ರಪಂಚಕೆಲ್ಲ ಹರಡಿ ಲಾಕ್ ಡೌನ್ ಅನ್ನು ವುದು ಸಾಮಾನ್ಯ ವಾಗಿಬಿಟ್ಟಿದೆ
ಈ ಸಮಯದಲ್ಲಿ ಉದ್ಯೋಗಿಗಳು , ಓನರ್ ಗಳು ಹೂಡಿಕೆ ಮಾಡಿದವರು , ಪ್ರೊಫೆಷನಲ್ ಗಳು ಸರ್ಕಾರ ಎಲ್ಲರಿಗು ಕಷ್ಟದ ಸಮಯ ಆದರೆ ಹೇಗೆ ಈ ಕಷ್ಟವನ್ನು ಸುಲಭವಾಗಿ ಹೆದರಿಸುವುದು ಎಂದು ತಿಳಿಯೋಣ .
-ಮೊದಲನೆಯದಾಗಿ ನಿಮ್ಮ ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿಯಿರಿ
ಸಾಕಷ್ಟು ಬರಿ ನಮ್ಮ ಸಮಸ್ಯೆಗಳು ನಮ್ಮ ಸಮಸ್ಯೆಗಳಲ್ಲವೇ ಅಲ್ಲ , ಬೇರೆಯವರ ಸಮಸ್ಯೆ ಗಳನ್ನೂ ನಾವು ಮನಸ್ಸಿಗೆ ಹಚ್ಚಿ ಕೊಂಡು ಕೊರಗುವುದು ಹೆಚ್ಚು , ಟಿವಿ ನ್ಯೂಸ್ , ಬೇರೆ ಬಿಸಿನೆಸ್ ಸೆಕ್ಟರ್ ನಲ್ಲಿ ಇರುವ ಸಮಸ್ಯೆ , ಪೊಲಿಟಿಕಲ್ ಸಮಸ್ಯೆ ಎಲ್ಲ ವನ್ನು ಕೇಳಿ ನಮ್ಮ ಭವಿಷ್ಯ ಏನಾಗುವುದೋ ಎಂದು ಯೋಚಿಸುತ್ತೇವೆ , ಸಾಕಷ್ಟು ಬರಿ ನಮ್ಮ ಸಮಸ್ಯೆ ಗಳನ್ನೂ ವಿಶ್ಲೇಷಿಸುವುದರಿಂದ ಸಮಸ್ಯೆಯೇ ಆಳ ಅರಿವಾಗುತ್ತದೆ , ಮತ್ತು ಕೆಲವು ಬರಿ ಅದು ಸಮಸ್ಯೆ ಅಲ್ಲದಿರಬಹುದು
-ಇನ್ನು ನಿಜವಾದ ಸಮಸ್ಯೆ ಇದ್ದಾಗ
ಸಮಸ್ಯೆ ನಿಜವಾಗಿ ನಿಮ್ಮದಾಗಿದ್ದರೆ ಮೊದಲು ನಾವು ಸಮಸ್ಯೆ ಯನ್ನು ವಿರೋಧಿಸುವುದನ್ನು ಬಿಟ್ಟು ಮೊದಲು ಸಮಸ್ಯೆಯನ್ನು ಸ್ವೀಕರಿಸಬೇಕು ಉದಾಹರಣೆಗೆ ಕರೋನ ಒಂದು ಸಮಸ್ಯೆ ಜಗತ್ತಿನಾದ್ಯಂತ ಇದು ಸಮಸ್ಯೆಯೇ ಇದರಿಂದ ಸಾಕಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ,ಬಿಸಿನೆಸ್ ನಷ್ಟವಾಗಿದೆ , ಉದ್ಯೋಗ ಕಳೆದುಕೊಂಡಿದ್ದಾರೆ , ಆದರೆ ಈ ಸಮಸ್ಯೆ ಯನ್ನು ನಾವು ಮೊದಲು ಸ್ವೀಕರಿಸಬೇಕು ಸಮಸ್ಯೆಯನ್ನು ಒಪ್ಪಿಕೊಳ್ಳದೆ ಅದನ್ನು ಪರಿಹರಿಸಲಾಗುವುದಿಲ್ಲ , ನಿಮ್ಮ ಸಮಸ್ಯೆ ಯಾವುದೇ ಆಗಿರಲಿ ಮೊದಲು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳಿ ಆಗ ಮಾತ್ರ ಸಮಸ್ಯೆ ಪರಿಹರಿಸಲು ದಾರಿ ಕಾಣುತ್ತದೆ .
-ಪ್ರತಿ ಸಮಸ್ಯೆಯು ಒಂದು ಒಳ್ಳೆಯದನ್ನು ತನ್ನ ಜೊತೆಯಲ್ಲಿ ತಂದಿರುತ್ತದೆ ಎಂದು ಮರೆಯಬೇಡಿ
ಎರಡನೇ ವರ್ಲ್ಡ್ ವಾರ್ ಸಮಯದಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ಯುದ್ಧ ನಡೆಯುತ್ತಿರುವಾಗ ಇಂಗ್ಲೆಂಡ್ ಗೆ ಹೆಚ್ಚಿನ ಹಣ ಬೇಕಿತ್ತು ಆಗ ಇಂಗ್ಲೆಂಡ್ ತನ್ನ ಅಧೀನದಲ್ಲಿದ್ದ ಭಾರತದಲ್ಲಿ ಎಲ್ಲ ವಸ್ತುಗಳ ಮೇಲೆ ಸುಂಕ ಹೆಚ್ಚಿಸಿತು ಇದರಿಂದ ಒಳ ಜಗಳದಲ್ಲಿ ನಿರತರಾಗಿದ್ದ ಭಾರತದ ರಾಜರಲ್ಲಿ ಬ್ರಿಟಿಷರ ವಿರುದ್ಧ ಕೋಪ ಹೆಚ್ಚಿತ್ತು ಇದರ ಜೊತೆಗೆ ಭಾರತಕ್ಕೂ ಜರ್ಮನಿ ಇಂಗ್ಲೆಂಡ್ ನಡುವೆ ನಡಿಯುತಿದ್ದ ಯುದ್ದಕ್ಕೂ ಯಾವುದೇ ಸಂಭಂದವಿರಲಿಲ್ಲ ಆದರೂ ಬ್ರಿಟಿಷರು ಭಾರತೀಯರನ್ನ ಸೇನೆಗೆ ತುಂಬಲು ಬಲವಂತವಾಗಿ ಇಲ್ಲಿನ ಯುವಕರನ್ನ ಕರದೊಯ್ಯುತ್ತಿದ್ದರು
ಜೊತೆಗೆ ಯುದ್ದದ್ದಲ್ಲಿ ನಿರತರಾಗಿದ್ದ ಸೈನಿಕರಿಗೆ ಬೇಕಾದ ಆಹಾರವನ್ನು ಭಾರತದಲ್ಲಿ ಬರಗಾಲವಿದ್ದರೂ ಅಲ್ಲಿಗೆ ಸಾಗಿಸುತ್ತಿದ್ದರು ಇದರಿಂದ ಭಾರತದಲ್ಲಿ ಅಲಲ್ಲಿ ಪ್ರಾರಂಭವಾಗಿದ್ದ ಸ್ವಾತಂತ್ರದ ಹೋರಾಟ ಭುಗಿಲೆದ್ದಿತು ಅಲ್ಲಿಯವರೆಗೆ ಬೇರೆ ಬೇರೆ ಯಾಗಿ ಸ್ವತಂತ್ರ ಹೋರಾಟ ಮಾಡುತಿದ್ದ ಭಾರತೀಯರು ಈ ಎಲ್ಲ ಸಮಸ್ಯೆ ಗಳಿಂದ ಒಗ್ಗಟ್ಟಾದರು ಮತ್ತು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಒಂದಾದರು ಅದೇ ಸಮಯಕ್ಕೆ ಗಾಂಧೀಜಿ ಯವರ ಸಾರಥ್ಯದಲ್ಲಿ ಸ್ವತಂತ್ರ ಹೋರಾಟ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಿ ಕೊನೆಗೂ ನಮಗೆ ಸ್ವತಂತ್ರ ದೊರೆಯಿತು
ಇಲ್ಲಿ ನಾವು ಗಮನಿಸಬೇಕಾದ ಅಂಶ ವೇನೆಂದರೆ ಪ್ರತಿ ಸಮಸ್ಯೆಯಲ್ಲೂ ಒಂದು ಒಳ್ಳೆಯದು ಇದ್ದೆ ಇರುತ್ತದೆ , ನಿಮ್ಮ ಸಮಸ್ಯೆ ನಿಮಗೆ ಯಾವರೀತಿ ಒಳ್ಳೆಯದನ್ನು ಮಾಡಬಹುದು ಎಂದು ಯೋಚಿಸಿ
– ಬೇರೆಯವರ ದೃಷ್ಟಿಕೋನ ಸಾಲ ಪಡೆಯಬೇಡಿ
ಸಾಕಷ್ಟು ಬಾರಿ ನಾವು ಬೇರೆಯವರ ಸಮಸ್ಯೆಯನ್ನು ಹೇಗೆ ನೋಡಿ ವಿಶ್ಲೇಷಿಸುತ್ತಾರೆ ಹಾಗೆ ನಮ್ಮ ದೃಷ್ಟಿ ಕೋನವನ್ನು ಸೃಷ್ಟಿಸಿಕೊಂಡು ಬಿಡುತ್ತೇವೆ ಅದರಲ್ಲೂ ಟಿವಿ , ನ್ಯೂಸ್ ,ಇಂಟರ್ನೆಟ್ ಮೂಲಕ ಎಲ್ಲರು ನಮ್ಮ ಮೇಲೆ ತಮ್ಮ ದೃಷ್ಟಿಕೋನಗಳನ್ನು ಬಲವಂತವಾಗಿ ತುರುಕುತ್ತಾರೆ, ಸಮಸ್ಯೆ ಇರುವಾಗ ಮೊದಲು ನಮ್ಮ ದೃಷ್ಟಿಕೋನವನ್ನು ನಾವು ಅರಿತುಕೊಳ್ಳಬೇಕು ಜೊತೆಗೆ ಬೇರೆಯವರ ದೃಷ್ಟಿಕೋನವನ್ನು ಅದರಲ್ಲೂ ನಮ್ಮ ಸಮಸ್ಯೆಯನ್ನು ಹೆಚ್ಚು ಮಾಡಿ ತೋರಿಸುವ ದೃಷ್ಟಿಕೋನವನ್ನು ದೂರವಿಡಬೇಕು.