ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು…

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು

ನನಗೆ ‘ಪವರ್ ಆಫ್ ರೈಟಿಂಗ್’ ಬಗ್ಗೆ ಮೊದಲು ತಿಳಿದದ್ದು 1996 ರಲ್ಲಿ. ನನ್ನ ಒಬ್ಬ ಸ್ನೇಹಿತ ಸಮಸ್ಯೆಗಳನ್ನು ಕಾಗದದ ಮೇಲೆ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದ. ಕಾಗದದ ಮೇಲೆ ಬರೆದ ತಕ್ಷಣ ಸಮಸ್ಯೆ ಹೇಗೆ ಪರಿಹಾರ ಆಗೋಕೆ ಸಾಧ್ಯ ಅಂತ ನಿಮಗೆ ನಗು ಬರಬಹುದು. ಆದರೆ, ಇದು ನಾನು ಅನುಸರಿಸಿ, ಸಂಪೂರ್ಣ ಯಶಸ್ಸು ಕಂಡುಕೊಂಡ ಮಾರ್ಗ. ಅದಕ್ಕಾಗೇ ನಾನು ‘ಪವರ್ ಆಫ್ ರೈಟಿಂಗ್’ ಅಂದದ್ದು. ಬರವಣಿಗೆಯ ಶಕ್ತಿ. 1996ರ ಆ ಕಾಲದಲ್ಲಿ ನನಗೆ ತುಂಬಾ ಹಣಕಾಸಿನ ತೊಂದರೆ ಇತ್ತು, ಜೊತೆಗೆ ಏನೇನೋ ಸಾಧಿಸೋ ಆಸೆ ಕೂಡ ಇತ್ತು, ತುಂಬಾ ಕನಸುಗಳಿತ್ತು. ನನ್ನ ಮುಂದೆ ಹಲವಾರು ಆಯ್ಕೆಗಳಿದ್ದವು, ಆದರೆ ಏನು ಮಾಡಬೇಕು ಅನ್ನುವ ಸ್ಪಷ್ಟ ನಿರ್ಧಾರ ಮಾಡೋದು ಮಾತ್ರ ಕಷ್ಟವಾಗಿತ್ತು.

ಆಗಿನ ನನ್ನ ಮನಸ್ಥಿತಿ ಹೇಗಿತ್ತು ಅಂದ್ರೆ ಎಲ್ಲಾ ಸಮಸ್ಯೆಗೆ ಸಾಲ ಪರಿಹಾರ ಅಂದ್ಕೊಂಡಿದ್ದೆ. ಏನೇ ತೊಂದರೆ ಬರಲಿ ಮೊದಲು ಬರ್ತಾ ಇದ್ದ ಯೋಚನೆ, ಸಾಲ ಮಾಡೋಣ ಅನ್ನೋದು. ಮೊದಲಿಗೆ ನಾನು ನನ್ನ ಆ ಮನಸ್ಥಿತಿ ಬದಲಾಯಿಸಿಕೊಂಡೆ, ಹಣಕಾಸು ಸಮಸ್ಯೆಯಿಂದ ಹೊರ ಬರೋದಕ್ಕೆ ಸಾಲ ಪರಿಹಾರ ಅಲ್ಲ, ಆದಾಯ ಗಳಿಕೆ ಪರಿಹಾರ ಅನ್ನೋದು ಅರ್ಥ ಮಾಡಿಕೊಂಡೆ. ಅದಕ್ಕೆ ತಕ್ಕಂತೆ ಯೋಚಿಸೋಕೆ ಆರಂಭಿಸಿದೆ. ನನ್ನ ಮುಂದಿದ್ದ ಹತ್ತು ಹಲವು ಆಯ್ಕೆಗಳ ನಡುವೆ ಸೇಲ್ಸ್ ಬಗ್ಗೆ ಗಮನ ಕೊಡೋದಕ್ಕೆ ನಿರ್ಧರಿಸಿದೆ. ಅದೊಂದರ ಮೇಲೆ ಪೂರ್ತಿಯಾಗಿ ಫೋಕಸ್ ಮಾಡಿದೆ. ಸಮಸ್ಯೆ ತಾನಾಗಿಯೇ ಕರಗಿ ಹೋಯ್ತು, ಇದಕ್ಕೆ ಕಾರಣ ನಾನು ಕಲಿತ ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು.

ಕೆಲ ವರ್ಷಗಳ ಹಿಂದೆಯೂ ಕೂಡ ಇಂತಹ ಒಂದು ಸಂದಿಗ್ಧತೆ ಎದುರಾಗಿತ್ತು. ಹಲವಾರು ವ್ಯವಹಾರ ನಡೆಸ್ತಾ ಇದ್ದೆ. ಆದರೆ, ನನ್ನ ಅಂತಿಮ ಗುರಿ ಏನಿರಬೇಕು, ನನ್ನನ್ನು ಜನ ಯಾವ ರೀತಿ ಗುರುತಿಸಬೇಕು, ಅನ್ನೋ ಯೋಚನೆ ಬಂದಾಗ ಮತ್ತೆ ಈ ಪವರ್ ಆಫ್ ರೈಟಿಂಗ್ ಸಹಾಯ ಮಾಡಿತು. ನನ್ನ ಗುರಿಯನ್ನು ರಿಯಲೈಸ್ ಮಾಡಿಕೊಳ್ಳೋದಕ್ಕೆ ಸಹಾಯ ಮಾಡಿತು. ನಾನು ಜನರಿಗೆ ಸ್ಫೂರ್ತಿಯಾಗಬೇಕು ಅಂತ ನಿರ್ಧರಿಸಿದೆ ಮತ್ತು ಮಾಸ್ಟರ್ ಕೋಚ್ ಆಗುವ ಕಡೆ ಫೋಕಸ್ ಮಾಡಿದೆ. ಹೀಗಾಗಿ, ಈಗ ಈ ಸ್ಥಾನದಲ್ಲಿದ್ದೇನೆ. ಕನ್ನಡದ ಮೊದಲ ಬಿಸ್ನೆಸ್  ಕೋಚ್ ಅನ್ನಿಸಿಕೊಂಡಿದೀನಿ. ಮಾಸ್ಚರ್ ಕೋಚ್ ಸತ್ಯ ಅಗಿದ್ದೇನೆ.

ಹಾಗಿದ್ದರೆ, ಈ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳೋದಕ್ಕೆ ನನಗೆ ಸಹಾಯ ಮಾಡಿದ್ದು ಏನು? ಸಮಸ್ಯೆಗಳನ್ನು ಎದುರಿಸಲು ನಾನು ಬಳಸಿದ 5 ಆಯುಧಗಳು. ನನ್ನ ಹೋರಾಟದ ದಿನಗಳಲ್ಲಿ ನನಗೆ ಸ್ಫೂರ್ತಿಯಾಗಿದ್ದ “ಸ್ಟಾಪ್ ವರಿಯಿಂಗ್, ಸ್ಚಾರ್ಟ್ ಲಿವಿಂಗ್“ ಪುಸ್ತಕದಲ್ಲಿದ್ದ 5 ಫಾರ್ಮುಲಾಗಳು. ಸಮಸ್ಯೆಗಳಿಂದ ಹೊರಬರಲು ಬಳಸಬಹುದಾದ ಈ 5 ಸೂತ್ರಗಳನ್ನು ಈಗ ವಿವರಿಸ್ತೇನೆ. ಆದರೆ, ನೆನಪಿಡಿ ಇದರ ಪ್ರತಿಯೊಂದು ಹಂತವನ್ನೂ ನೀವು ಕಾಗದದ ಮೇಲೆ ಬರೆಯಲೇ ಬೇಕು.ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು ಇಲ್ಲಿ ವಿವರಸಲಿದೆ.

  • ನಿಮ್ಮ ಸಮಸ್ಯೆಯನ್ನು ಡಿಫೈನ್ ಮಾಡಿ – ಸಮಸ್ಯೆ ಡಿಫೈನ್ ಮಾಡೋದು ಅಂದರೆ ಅದರ ಬಗ್ಗೆ ಚಿಂತಿಸಿ ಕೊರಗೋದಲ್ಲ. ನಿಮ್ಮ ನಿಜವಾದ ಸಮಸ್ಯೆಗಳೇನು ಅನ್ನೋದನ್ನ ಕಾಗದದ ಮೇಲೆ ಪಟ್ಟಿ ಮಾಡೋದು. ವ್ಯವಹಾರದ ಸಮಸ್ಯೆ, ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ರಿಲೇಷನ್ ಶಿಪ್ ಸಮಸ್ಯೆ ಏನೇ ಇರಲಿ ಅದನ್ನು ಮನಸ್ಸಿನಿಂದ ಕಾಗದಕ್ಕೆ ಟ್ರಾನ್ಸಫರ್ ಮಾಡಿ. ಸಮಸ್ಯೆ ಮನಸ್ಸಲ್ಲೇ ಕೂತಿದ್ದಾಗ ಸ್ಪಷ್ಟವಾಗಿ ಯೋಚಿಸುವ ಶಕ್ತಿ ಕಡಿಮೆಯಾಗುತ್ತೆ. ಮನಸ್ಸನ್ನು ಆದಷ್ಟು ಖಾಲಿ ಮಾಡಿದಾಗ ಹೊಸದಾಗಿ ಚಿಂತಿಸುವ ಶಕ್ತಿ ಬರುತ್ತೆ ಮತ್ತು ಹೊಸ ದಿಕ್ಕಿನಲ್ಲಿ ಯೋಚಿಸುವುದು ಸಾಧ್ಯವಾಗುತ್ತೆ.
  • ಸಮಸ್ಯೆಯಿಂದ ಆಗಬಹುದಾದ ಅತ್ಯಂತ ಕೆಟ್ಟ ಪರಿಣಾಮವನ್ನು ಊಹಿಸಿ – ನಿಮ್ಮ ಮುಖ್ಯ ಸಮಸ್ಯೆಗಳನ್ನ ಪಟ್ಟಿ ಮಾಡಿದ ಮೇಲೆ, ಆ ಸಮಸ್ಯೆಗಳಿಂದ ಆಗಬಹುದಾದ ಅತ್ಯಂತ ಕೆಟ್ಟ ಪರಿಣಾಮಗಳನ್ನ ಊಹಿಸಿ, ಅವುಗಳನ್ನೂ ಕಾಗದದ ಮೇಲೆ ಬರೆಯಿರಿ. ಅತೀ ಕೆಟ್ಟ ಪರಿಣಾಮಗಳನ್ನು ಊಹಿಸಿದಾಗ ನಿಮ್ಮ ಮನಸ್ಸಿಗೆ ಒಂದು ಸ್ಪಷ್ಟತೆ ಸಿಗುತ್ತೆ ಮತ್ತು ಆ ಪರಿಣಾಮಗಳನ್ನು ಎದುರಿಸಲು ಮನಸ್ಸು ಸಿದ್ಧವಾಗುತ್ತೆ.
  • ಸಮಸ್ಯೆಗೆ ಮೂಲಕಾರಣ ಏನು ಎಂದು ಹುಡುಕಿ – ಸಮಸ್ಯೆಗೆ ಎರಡು ರೀತಿಯ ಕಾರಣಗಳಿರುತ್ತದೆ. ಒಂದು ಎಕ್ಸಟರ್ನಲ್ ಕಾರಣ (ಹೊರಗಿನ ಕಾರಣ), ಮತ್ತೊಂದು ಇಂಟರ್ನಲ್ ಕಾರಣ (ಒಳಗಿನ ಕಾರಣ). ನಿಮ್ಮ ಸಮಸ್ಯೆಗೆ ಏನು ಕಾರಣ ಅನ್ನೋದನ್ನು ಸರಿಯಾಗಿ ಯೋಚಿಸಿ, ಗುರುತಿಸಿ. ಎಕ್ಸಟರ್ನಲ್ ಕಾರಣಗಳಾಗಿದ್ದರೆ ಅದರ ಮೇಲೆ ನಮ್ಮ ಹತೋಟಿ ಇರೋದಿಲ್ಲ. ಆದರೆ, ಇಂಟರ್ನಲ್ ಕಾರಣ ಅಂತಾದರೆ, ಸಮಸ್ಯೆಗೆ ಮೂಲ ಕಾರಣ ನಾವೇ ಅಂತ ಅರ್ಥ. ಸಮಸ್ಯೆ ಬಗೆಹರಿಯಬೇಕು ಅಂದ್ರೆ ನಾವು ಬದಲಾಗಬೇಕು. ನಾವು ಯೋಚಿಸುವ ರೀತಿಯ ಬದಲಾಗಬೇಕು. ಇದು ಸಾಧ್ಯವಾಗುವುದು ನಮ್ಮ ಸುತ್ತಲಿನ ಪರಿಸರವನ್ನು ಸರಿಪಡಿಸಿಕೊಂಡಾಗ. ಪರಿಸರ ನಮ್ಮನ್ನು ಒಳ್ಳೆಯ ರೀತಿಯಲ್ಲಿ ಅಥವಾ ಕೆಟ್ಟ ರೀತಿಯಲ್ಲಿ ಪ್ರಭಾವಿಸಬಹುದು. ಒಳ್ಳೆಯ ಪರಿಸರ ನಮ್ಮ ವಿಲ್ ಪವರ್, ಅಂದ್ರೆ ಮನೋಶಕ್ತಿಯನ್ನು ವೃದ್ಧಿಸುತ್ತೆ. ಸರಿಯಾದ ಕೆಲಸ ಮಾಡುವ ಇಚ್ಛೆಯನ್ನು ಹುಟ್ಚಿಸುತ್ತೆ. ಹೀಗಾಗಿಯೇ, ನೀವು ಗಮನಿಸಿರಬಹುದು ಮನೆಯಲ್ಲಿ ಎಕ್ಸರ್ ಸೈಸ್ ಮಾಡೋದಕ್ಕೆ ಆಸಕ್ತಿಯೇ ಇಲ್ಲದವರೂ ಕೂಡ ಜಿಮ್ ನಲ್ಲಿ ಚೆನ್ನಾಗಿ ವರ್ಕ್ ಔಟ್ ಮಾಡ್ತಾರೆ. ಇದು ಸುತ್ತಲಿನ ಪರಿಸರದ ಪ್ರಭಾವದಿಂದ. ಪರಿಸರ ಸರಿಯಾಗಿಲ್ಲ ಅಂದ್ರೆ ನೀವು ಮತ್ತೆ ಮತ್ತೆ ಅದೇ ತಪ್ಪು ಮಾಡ್ತಾ ಇರ್ತೀರ, ಮತ್ತೆ ಮತ್ತೆ ಅದೇ ಸಮಸ್ಯೆಯಲ್ಲಿ ಸಿಕ್ಕಿಕೊಳ್ತಾ ಇರ್ತೀರ. ಇಂತಹ ಒಂದು ಪಾಸಿಟಿವ್ ಪರಿಸರ ಸೃಷ್ಚಿಸುವುದಕ್ಕಾಗಿಯೇ  ನಾವು ಸುಮಾರು 11 ವರ್ಷದಿಂದ ನಮ್ಮ ಬಿಸ್ನೆಸ್ ಟೈಕೂನ್ ಅಕಾಡೆಮಿಯಲ್ಲಿ(BTA) ವಾರಕ್ಕೊಮ್ಮೆ ಎಲ್ಲಾ ಸೇರಿ ಚರ್ಚಿಸ್ತೀವಿ. ಒಂದು ಕಮ್ಯುನಿಟಿ ಸೃಷ್ಚಿಸಿದ್ದೀವಿ. 600 ವಾರಗಳಿಂದ ಇದು ನಿರಂತರವಾಗಿ ನಡೀತಾ ಇದೆ. ಅಲ್ಲಿ ಒಂದು ಒಳ್ಳೆಯ ಪರಿಸರ ನಿರ್ಮಿಸಿ ಮನಸ್ಸಿಗೆ ಬಲ ಕೊಡುವ ಯತ್ನ ಮಾಡ್ತೇವೆ. ಹೀಗಾಗಿ, ಸಮಸ್ಯೆ ಒಳಗಿನದ್ದು ಅಂತಾದ್ರೆ ಸರಿಯಾದ ಪರಿಸರ ನಿರ್ಮಿಸಿಕೊಂಡು, ಆ ಮೂಲಕ ಸಮಸ್ಯೆಯ ಆ ಮೂಲಕಾರಣವನ್ನು ನಿವಾರಿಸಿಕೊಳ್ಳುವುದು ಮುಖ್ಯ.
  • ಸಾಧ್ಯವಿರುವ ಎಲ್ಲಾ ಪರಿಹಾರಗಳನ್ನು ಬರೆಯಿರಿ – ಮೇಲಿನ ಮೂರು ಹಂತದ ನಂತರ ನಿಮ್ಮ ಮನಸ್ಸು ತುಂಬಾ ಕ್ಲಿಯರ್  ಆಗಿರುತ್ತೆ. ಈಗ ಸಮಸ್ಯೆಗೆ ಸಾಧ್ಯವಿರುವ ಎಲ್ಲಾ ಪರಿಹಾರಗಳ ಬಗ್ಗೆ ಯೋಚಿಸಿ. ಮತ್ತು ಅದನ್ನು ಕಾಗಗದ ಮೇಲೆ ಬರೆಯಿರಿ. ಒಂದರೆಡು ಪರಿಹಾರ ಅಲ್ಲ. ಕನಿಷ್ಟ 8-10 ಪರಿಹಾರಗಳನ್ನು ಬರೀಬೇಕು. ಮನಸ್ಸು ಶಾಂತವಾಗಿದ್ದಾಗ, ಅದು ತುಂಬಾ ಅದ್ಭುತವಾಗಿ ಕೆಲಸ ಮಾಡುತ್ತದೆ. ಸಾಕಷ್ಟು ಪರಿಹಾರಗಳು ಹೊಳೆಯುತ್ತವೆ. ಅದರಲ್ಲಿ ಉತ್ತಮ ಎನಿಸೋ 3 ಪರಿಹಾರಗಳನ್ನು ಗುರುತಿಸಿ.
  • ಅತ್ಯುತ್ತಮವಾದ ಒಂದು ಪರಿಹಾರವನ್ನು ಆಯ್ಕೆ ಮಾಡಿ – ಶಾರ್ಟ್ ಲಿಸ್ಟ್ ಮಾಡಿದ ಪರಿಹಾರಗಳಲ್ಲೇ ಬೆಸ್ಟ್ ಅನಿಸುವ ಒಂದು ಪರಿಹಾರವನ್ನು ಆಯ್ದುಕೊಂಡು ಅದರ ಮೇಲೇ ಪೂರ್ತಿ ಫೋಕಸ್ ಮಾಡಿ. ನಿಮ್ಮೆಲ್ಲಾ ಶಕ್ತಿ, ಸಾಮರ್ಥ್ಯಗಳನ್ನು ಅದರ ಮೇಲೆ ಹಾಕಿ, ಕೆಲಸ ಮಾಡಿ. ಒಂದೇ ಪರಿಹಾರದತ್ತ ನಿರಂತರವಾಗಿ ಗಮನ ಕೇಂದ್ರೀಕರಿಸಿದರೆ ಅದ್ಭುತವಾದ ಫಲಿತಾಂಶ ಸಿಗುತ್ತೆ.

 

ಈ 5 ಹಂತಗಳನ್ನು ಬಳಸಿಕೊಂಡು ಯಾವುದೇ ಪರಿಹಾರಕ್ಕೂ ಲಾಜಿಕಲ್ ಪರಿಹಾರ ಕಂಡುಕೊಳ್ಳುವುದು ಸುಲಭ. ಇದು ಸೆಲ್ಫ್ ಹೆಲ್ಪ್ ಟೆಕ್ನಿಕ್. ಅಂದರೆ, ಈ 5 ಆಯುಧಗಳನ್ನು ಬಳಸಿಕೊಂಡು ನೀವಾಗಿಯೇ, ನಿಮ್ಮ ಸ್ವಂತ ಯೋಚನಾ ಶಕ್ತಿ, ಮನೋಬಲ ಬಳಸಿಕೊಂಡು ಸಮಸ್ಯೆಗಳಿಂದ ಹೊರಬರಬಹುದು. ಪ್ರಯತ್ನಿಸಿ ನೋಡಿ. ಫಲಿತಾಂಶ ಏನಾಯ್ತು ಅಂತ ನಮಗೆ ಬರೆದು ತಿಳಿಸಿ ಅಥವಾ ಕೆಳಗೆ ಕಮೆಂಟ್ ಮಾಡಿ.

ಇದೇ ವಿಷಯಕ್ಕೆ ಸಂಬಂಧಿಸಿದ ವೀಡಿಯೋಗಳಿಗಾಗಿ Master Coach Sathya’s BTA ಯೂಟ್ಯೂಬ್ ಛಾನಲ್ ನೋಡಿ  

Similar Posts