EAT THAT FROG /ಈಟ್ ದಟ್ ಫ್ರಾಗ್

Eat That Frog/ಈಟ್ ದಟ್ 4 ಫ್ರಾಗ್??

Eat That Frog

                                          Eat That Frog                    

   2015 ನವೆಂಬರ್ 1. ಚೆನ್ನೈ ನ ಇಂಟರ್ ನ್ಯಾಷನಲ್ ಸೆಮಿನಾರ್ ನಲ್ಲಿ ಕುಳಿತಿದ್ದೆ, ನನ್ನ ಒಳಗೆ ಒಂದು ರೀತಿಯ ಸಂತೋಷ , ಹೆಮ್ಮೆ, ಕುತೂಹಲ ಎಲ್ಲ ಒಟ್ಟಿಗೆ ಬಂದಿತ್ತು ಕಾರಣ” ಬ್ರೈನ್ ಟ್ರೇಸಿ” AUTHOR AND COACH, ಸುಮಾರು 6 ಅಡಿ ಎತ್ತರ , ಬಿಳಿ ಕೂದಲು, ಜೀವನದ ತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತಿತ್ತು , 75 ರಿಂದ 78 ವರ್ಷ್ ವಯಸ್ಸು ಸುಮಾರು 90 ನಿಮಿಷಗಳ ಕಾಲ ನಿರಾಯಾಸವಾಗಿ ಜೀವನ, ಯಶಸ್ಸು , ರಿಲೇಷನ್ಶಿಪ್ ಹೀಗೆ ತಮ್ಮ ಜೀವನದ ಅನುಭವ ಗಳನ್ನೂ ಹಂಚಿಕೊಂಡರು . (ಈ ಸೆಶನ್ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ )
 
ನಿಮಗೆ ಅನ್ನಿಸಿರಬಹುದು ಯಾರು ಬ್ರೈನ್ ಟ್ರೇಸಿ , 2002 ನನ್ನ ಜೀವನದ ಮುಖ್ಯವಾದ ದಿನ , ನವೆಂಬರ್ 29 ನನ್ನ ಮದುವೆಯಾದ ದಿನ , ಸಾಕಷ್ಟು ಬೇರೆ ಬೇರೆ ಮದುವೆಯ ಗಿಫ್ಟ್ ನಡುವೆ ನನಗೆ ನನ್ನ ಸ್ನೇಹಿತ ಕೊಟ್ಟ “ಈಟ್ ದಟ್ ಫ್ರಾಗ್/Eat That Frog ” ಪುಸ್ತಕ ಸಿಕ್ಕಿತು ಹೆಸರೇ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು, ಪುಸ್ತಕ ತೆಗೆದುಕೊಂಡು ಓದಲು ಶುರುಮಾಡಿದೆ ,ಇದು ನನ್ನ ಬಿಸಿನೆಸ್ ಅನ್ನು ನೋಡುವ ರೀತಿಯನ್ನೇ ಬದಲಿಸಿತು ,ನನ್ನ ಇಡೀ ದಿನವನ್ನು ಹೇಗೆ ಹೆಚ್ಚಿನ ಪ್ರೊಡಕ್ಟಿವ್ ಆಗಿ ಮಾಡಬಹುದು ಎಂದು ಅರಿತೆ ಈ ಪುಸ್ತಕದಿಂದ ನಾನು ಕಲಿತ 4 ಪಾಯಿಂಟ್ಸ್ ನನ್ನ ಬಿಸಿನೆಸ್ಅನ್ನು ಬೆಳೆಸಲು ಬಹಳ ಸಹಕಾರಿಯಾಯಿತು, ಇಂದಿನ ನನ್ನ ಬರವಣಿಗೆಯಲ್ಲಿ ನಾನು ಅದನ್ನು ನಿಮೊಂದಿಗೆ ಹಂಚಿಕೊಳ್ಳಲಿದ್ದೇನೆ
 
1. ಮೇಕ್ ವರ್ಕ್ ಲಿಸ್ಟ್
ನನ್ನ ದಿನವನ್ನು ಪ್ರಾರಂಭಿಸುವ ಮೊದಲೇ ಇಂದಿನ ದಿನ ಏನೇನು ಕೆಲಸಗಳನ್ನು ಮಾಡಬೇಕು ಎಂದು ಲಿಸ್ಟ್ ಮಾಡುವುದು ,ಇದು ನನ್ನ ದಿನದ ಸುಮಾರು 4 ಗಂಟೆಗಳ ಕಾಲ ಉಳಿಸುತ್ತದೆ , ಸರಳವಾಗಿ ಹೇಳುತ್ತೇನೆ ಪ್ರತಿ ದಿನ ನಾವು ಆಫೀಸ್ ಗೆ ಹೋದ ಮೇಲೆ ,ಅಥವಾ ಕೆಲಸ ಪ್ರಾರಂಭಿಸಿದ ಮೇಲೆ ಏನು ಕೆಲಸ ಮಾಡಬೇಕೆಂದು ಯೋಚಿಸುತ್ತಿದ್ದರೆ ಅದರಲ್ಲೇ ಸುಮಾರು ಕಾಲ ವ್ಯರ್ಥವಾಗುತ್ತದೆ , ಕಾರಣ ನಮ್ಮ ಮೈಂಡ್ ಗೆ ಏನು ಕೆಲೆಸ ಮಾಡಬೇಕು ಎಂದು ತೋಚುವುದಿಲ್ಲ ಅದ್ದರಿಂದ ದಿನವನ್ನು ಪ್ರಾರಂಭಿಸುವ ಮೊದಲೇ ಇಂದಿನ ದಿನ ಏನು ಮಾಡಬೇಕೆಂದು ನಮ್ಮ ಮೈಂಡ್ ಗೆ ಸರಿಯಾಗಿ ತಿಳಿಸುವುದು ಬಹಳ ಮುಖ್ಯ.
 
(When you write all your goals, your mind will have much better clarity. Also plan all your tasks in advance.) ೮೦% ಟೈಮ್ ನೀವು ಏನ್ ಎಫರ್ಟ್ ಹಾಕ್ತಿರಾ ಅದರಿಂದ ಬರಿ ೨೦% ರಿಸಲ್ಟ್ ಬರುತ್ತೆ. ೨೦% ಎಫರ್ಟ್ ಹಕ್ಕಿದು ೮೦% ರಿಸಲ್ಟ್ ಸಿಗುತ್ತದೆ. (Always consider the consequences.)
 
2. ಕಷ್ಟದ ಕೆಲಸವನ್ನು ಮೊದಲು ಮಾಡಿ
“ಈಟ್ ದಟ್ ಫ್ರಾಗ್/Eat That Frog” ಎಂದರೆ ನಾವು ಬ್ಯುಸಿನೆಸ್ನಲ್ಲಿ ಯಾವುದೊ ಕಷ್ಟ ಕರವಾದ ಕೆಲಸವಿದೆಯೋ ಅದನ್ನು ಮೊದಲು ಮಾಡಬೇಕು ಉದಾಹರಣೆಗೆ ವೆಂಡರ್ ಗೆ ಪೇಮೆಂಟ್ ಮಾಡಬೇಕು ಆದರೆ ಹಣವಿಲ್ಲ ಅವರ ಬಳಿ ಸ್ವಲ್ಪ ಸಮಯ ಕೇಳಬೇಕು ಆದರೆ ಸಾಮಾನ್ಯವಾಗಿ ಪೇಮೆಂಟ್ ಕೊಡಲು ಹಣವಿಲ್ಲದಿದ್ದರೆ ನಾವು ವೆಂಡರ್ಸ್ ನಿಂದ ಬರುವ ಫೋನ್ ಕಾಲ್ ತೆಗೆಯುವುದಿಲ್ಲ , ಅವರಿಗೆ ಉತ್ತರಿಸುವುದಿಲ್ಲ ಇದರಿಂದ ನಮ್ಮ ದಿನವೆಲ್ಲ ಇದನ್ನು ಮ್ಯಾನೇಜ್ ಮಾಡುವುದರಲ್ಲೇ ಕಳೆದು ಹೋಗುತ್ತದೆ,
 
ಇದೆ ಕಷ್ಟದ ಕೆಲಸ ದಿನ ಪ್ರಾರಂಭಿಸುತ್ತಲೇ ನಾವೇ ಫೋನ್ ಕಾಲ್ ಮಾಡಿ ಪೇಮೆಂಟ್ ಮಾಡಲು ಆಗುತ್ತಿಲ್ಲ , ಸ್ವಲ್ಪ ಸಮಯ ಕೊಡಿ ಎಂದು ಕೇಳುವುದು ಕಷ್ಟವಾದರೂ ನಮ್ಮ ಸಮಯ ನಮ್ಮ ಫೋಕಸ್ ಅನ್ನು ಉಳಿಸುತ್ತದೆ ,(DO-NOT MAKE THIS AS HABIT , BUILD SURPLUS WORKING CAPITAL) ಹಾಗೆಯೇ ನಿಮ್ಮ ಎಂಪ್ಲೊಯೀ ಮಾಡಿದ ತಪ್ಪು ಅವರಿಗೆ ಹೇಳಬೇಕು, ಆದರೆ ನಮ್ಮ ಮೈಂಡ್ ಅದನ್ನು ಆಮೇಲೆ ಮಾಡಿದರೆ ಆಯಿತು ಎಂದು ಮುಂದೂಡುತ್ತದೆ ,ಹೀಗೆ ಬಿಸಿನೆಸ್ ನಲ್ಲಿ ಸಾಕಷ್ಟು ಕಷ್ಟದ ಕೆಲಸ ಅಥವಾ ಇಷ್ಟವಿಲ್ಲದ ಕೆಲಸ ಮುಂದೂಡದೆ ಅದನ್ನು ದಿನ ಪ್ರಾರಂಭಿಸಿದಾಗಲೇ ಮಾಡಿ ಮುಗಿಸಿದರೆ ದಿನ ಪೂರ್ತಿ ನಮ್ಮ ಬೇರೆ ಕೆಲಸಗಳ ಮೇಲೆ ಆದ್ಯತೆ ಕೊಡಬಹುದು .
 
(Practice creative procrastination for the urgent , not-so-urgents tasks, i.e know what to do first and which work to do later) ಎಟ್ ಥಟ್ ಫ್ರಾಗ್ ಅಂದ್ರೆ ಇದು , ಯಾವ ಕೆಲಸ ಅಗ್ಲಿಸ್ಟ್, ತೌಘಸ್ಟ್ , ಬಹಳ ಮುಜುಗರ ಪಡುವ ಕೆಲಸವನ್ನು ಮೊದಲು ಮಾಡುವುದು.
 
3. ಪ್ರೊಡಕ್ಟಿವ್ ವರ್ಕ್, ರೇಪಿಟೇಟಿವ್ ವರ್ಕ್
ನಮ್ಮ ಪೂರ್ತಿ ದಿನದ ಕೆಲೆಸವನ್ನು ಒಮ್ಮೆ ನೋಡಿದರೆ ನಾವು ಮಾಡುವ 80% ಕೆಲಸ ರೇಪಿಟೇಟಿವ್ , ಪ್ರತಿದಿನ ಅದನ್ನೇ ಮಾಡುತ್ತೇವೆ ಮತ್ತು ಇದು ಕೇವಲ ನಮ್ಮ ಬಿಸಿನೆಸ್ ಅನ್ನು ಮ್ಯಾನೇಜ್ ಮಾಡುವಂತೆ ಮಾಡುತ್ತದೆ ಇನ್ನು ನಾವು ಮಾಡುವ 20% ಕೆಲಸ ಕ್ರಿಯೇಟಿವ್ ಕೆಲಸ ನಮ್ಮ ಬಿಸಿನೆಸ್ ಅನ್ನು ಬೆಳೆಸುವುದು ಇದೆ 20% ಕೆಲಸ , ಈ 80% ಕೆಲಸವನ್ನು ನಾವು ನಮ್ಮ ಎಂಪ್ಲೋಯೀಸ್ ಗೆ ವಹಿಸಬೇಕು ಆಗ ಮಾತ್ರ ನಾವು ಕ್ರಿಯೇಟಿವ್ ಕೆಲಸ ಮಾಡಬಹುದು ಏಕೆಂದರೆ ಎಲ್ಲರ ಬಳಿ ಇರುವುದು 24 ಗಂಟೆ ಗಳು ಮಾತ್ರ ,ಅದನ್ನು ಬಳಸುವುದನ್ನು ಕಲಿಯಬೇಕು
 
ಫೋಕಸ್ ಆನ್ ದಿ ಕೀ ರಿಸಲ್ಟ್ಸ್, ಎಂಡ್ ಕೆಲಸ ಕಂಪ್ಲೀಟ್ ಆಗುವುದರ ಮೇಲೆ ಪುಶ್ ಮಾಡಬೇಕು .ಅಪ್ಲೈ ದಿಸ್ ಲಾ ಆಫ್ ತ್ರೀ, ನಿಮ್ಮ ಕೆಲಸಗಳ ಪಟ್ಟಿ ಮಡಿದ ಮೇಲೆ, ಅದರಲ್ಲ ಟಾಪ್ ೩ ಕೆಲಸವನ್ನು ಆಯ್ಕೆ ಮಾಡಿರಿ.ಕೆಲಸ ಪ್ರಾರಂಭಿಸುವ ಮೊದಲು ಚೆನ್ನಾಗಿ ತಯಾರಾಗಿ, ಪೂರ್ವ ಸಿದ್ಧತೆ ! ಮತ್ತು ನಿಮ್ಮ ಕೆಲಸವನ್ನು ಶುರು ಮಾಡುವಾಗ ಮಲ್ಟಿ ಟಾಸ್ಕಿನ್ಗ್ ಮಾಡಬೇಡಿ ,ಒಂದು ಕೆಲಸ ಮಾಡಬೇಕಾದರೆ ನಿಮ್ಮ ತನ , ಮನ ಮತ್ತು ಧನ ಇವೆಲ್ಲವನ್ನೂ ಕೊಟ್ಟಿ ಕೆಲಸವನ್ನು ಮಾಡಬೇಕು.ಇದರಿಂದ ಕೆಲಸವೂ ಬೇಗ ಆಗುತ್ತದೆ.ಜೊತೆಗೆ ಅಕ್ಯೂರಟಾಗಿರುತ್ತದೆ .
 
4. ಲರ್ನ್ ಟು ಸೇ ನೋ
ಸಾಮಾನ್ಯವಾಗಿ ನಾವು ಬಿಸಿನೆಸ್ ನಲ್ಲಿ ಇದ್ದಾಗ ಸಾಕಷ್ಟು ಬೇರೆ ಅವಕಾಶಗಳು , ನಾವು ಬೆಳೆದಂತೆ ಹೆಚ್ಚಿನ ಸ್ನೇಹಿತರು, ಬೇರೆ ಬೇರೆ ಸನ್ಮಾನ ,ಗೌರವ ,ಅವಾರ್ಡ್ ಹೀಗೆ ಸಾಕಷ್ಟು ಆಕರ್ಷಕ ಅವಕಾಶಗಳು ನಮ್ಮನು ಹಿಂಬಾಲಿಸುತ್ತದೆ ಆದರೆ, ಯಾವುದಕ್ಕೆ ನಾವು ನೋ ಎಂದು ಹೇಳಬೇಕು ಎನ್ನುವುದು ಬಹಳ ಮುಖ್ಯ , ಆಕರ್ಷಣೆ ಗಳಿಗೆ ಒಳಗಾಗಿ ನಮಗೆ ಜೀವನದಲ್ಲಿ ಮುಖ್ಯವಾದುದನ್ನ ಕಳೆದುಕೊಳ್ಳುತ್ತೇವೆ ಅಥವಾ ಅದರ ಮೇಲೆ ಫೋಕಸ್ ಕಳೆದುಕೊಳ್ಳುತ್ತೇವೆ , ಹೀಗೆ ಸಾಕಷ್ಟು ಜನ ತಮ್ಮ ಬಿಸಿನೆಸ್, ಸಮಯ ,ಹಣ,ಜೀವನವನ್ನು ಕಳೆದುಕೊಂಡಿದ್ದಾರೆ , ಆದ್ದರಿಂದ ನಾವು ಯಾವುದು ಬೇಡವೋ ಅದಕ್ಕೆ ನೋ ಎಂದು ಹೇಳುವುದು ಬಹಳ ಮುಖ್ಯ .ಇದು ಇಟ್ ಥಟ್ ಫ್ರಾಗ್/Eat That Frog  ಪುಸ್ತಕದ ಮುಖ್ಯಾಂಶ.
 
ನಿಮ್ಮ ಬಿಸಿನೆಸ್ ನಲ್ಲಿ ಬದಲಾವಣೆ ತರಲು ನಿಮಗೂ ಯಾವುದಾದರು ಪುಸ್ತಕ ಸಹಾಯ ಮಾಡಿದ್ದಾರೆ ಕಾಮೆಂಟ್ ಮಾಡಿ , ಹಾಗೆ ಶೇರ್ ಮಾಡಲು ಮರೆಯಬೇಡಿ

Similar Posts