“3 Empowering Steps for Women Entrepreneurs to Grow a Successful Homestay Business”
ರಮಾ ದೇವಿಯ HOMESTAY BUSINESS ನ ಯಶಸ್ಸಿನ ಪಯಣ ಮತ್ತು ಸಾಧನೆಗಳು – BTA ಡೈಮಂಡ್ ಮೆಂಬರ್
ರಮಾ ದೇವಿಯ ಅವರ ಶ್ರದ್ಧೆ, ಬೆಳವಣಿಗೆ, ಮತ್ತು ಪ್ರೇರಣೆಯೊಂದು. ದೇವಗಿರಿ HOMESTAY BUSINESS ಮಾಲಕಿ ಎಂದಾಗಿ, ಅವರು ತಮ್ಮ ಜೀವನ ಮತ್ತು ವ್ಯವಹಾರವನ್ನು ಶ್ರದ್ಧೆ ಮತ್ತು ಶ್ರಮದ ಮೂಲಕ ಪರಿವರ್ತನೆಗೊಳಿಸಿದ್ದಾರೆ. ಈ ಬ್ಲಾಗ್ನಲ್ಲಿ, ಅವರ ಪಯಣ, ಎದುರಿಸಿದ ಸವಾಲುಗಳು, ಮತ್ತು ಬಿಸಿನೆಸ್ ಟೈಕೂನ್ ಅಕಾಡೆಮಿಯ (BTA) ಡೈಮಂಡ್ ಸದಸ್ಯೆಯಾಗಿ ಗಳಿಸಿದ ಸಾಧನೆಗಳನ್ನು ಆಳವಾಗಿ ತಿಳಿಯೋಣ.
ನನ್ನ ಯಶಸ್ಸಿನ ಕಥೆ – HOMESTAY BUSINESS
ನಾನು ರಮಾ ದೇವಿ, ದೇವಗಿರಿ ಹೋಂಸ್ಟೇಯ ಮಾಲಕಿ. ಈ HOMESTAY BUSINESS ಯನ್ನು ಸ್ಥಾಪಿಸಲು ನನ್ನ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಆದರೆ ನಾನು ಯಾವಾಗಲೂ ನಂಬುತ್ತಿದ್ದೆ – ಯಾವುದೇ ಸವಾಲು ನಮ್ಮಲ್ಲಿ ಅಡಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊರತರುತ್ತದೆ.
ನಾನು ಒಂದು ಉತ್ತಮ ಕುಟುಂಬದಲ್ಲಿ ಜನಿಸಿದೆ, ನನಗೆ 18 ನೇ ವಯಸಿನಲ್ಲಿ ಮದುವೆ ಆಯಿತು, ಹಾಗೆ 19 ನೇ ವಯಸ್ಸಿನಲ್ಲಿ ಮಕ್ಕಳು, ನನ್ನ ಪತಿ, ಮಾಧವ್, ಸರಕಾರದ ನೌಕರರಾಗಿದ್ದರು. ಕಾರಣಾಂತರದಿಂದ ನನ್ನ ತಂದೆ ತೀರಿಕೊಂಡರು, ಮನೆಯ ಆರ್ಥಿಕ ಪರಿಸ್ಥಿತಿ ತುಂಬಾನೇ ಕಷ್ಟ ವಾಗಿತ್ತು, ಆ ಸಂಧರ್ಭದಲ್ಲಿ ನಾನು ಓದಲು ಪ್ರಾರಂಭಿಸಿದೆ, ನಂತರ ನನಗೆ ಮೆರಿಟ್ ಅಲ್ಲಿ ಸಿಟ್ ಸಿಕ್ಕಿತು, ನಾನು ನನ್ನ ಹಸ್ಬೆಂಡ್ ಇಬ್ಬರು ಸರ್ಕಾರದ ಕೆಲಸ ಮಾಡುತ್ತಿದೆವು.
ನಂತರದ ದಿನಗಳಲ್ಲಿ ನಾವು ಒಂದು ಪ್ರಾಪರ್ಟಿ ಖರೀದಿಸಿದ್ದೆವು, ಅದು ಮರಡು ಭೂಮಿ ಆಗಿತ್ತು, ನಮ್ಮ ದುರದೃಷ್ಟದಿಂದ ಅದನ್ನು ಬೇರೆ ಅವರು ಒತ್ತುವರಿ ಮಾಡಿಕೊಂಡಿದ್ದರು, ಅದನ್ನು ಸರಿ ಮಾಡಲು ನಮಗೆ 6 ವರ್ಷ ಕಳೆಯಿತು, ನಂತರ ಅದನ್ನು ಪಸಲು ಭೂಮಿಯಾಗಿರಿಸಲು ಇನ್ನು 6 ವರ್ಷ ಬೇಕಾಯಿತು, ಮಳೆ ಇಲ್ಲದೆ ಬೆಳೆ ಎಲ್ಲ ನಾಶವಾಹಿತು, ಅಷ್ಟರಲ್ಲಿ ನಾವು ತುಂಬಾನೇ ಸಾಲದಲ್ಲಿ ಸಿಲಿಕಿದ್ದೆವು.
ನಂತರ ಏನು ಮಾಡಬೇಕೆಂದು ಯೋಚಿಸುತ್ತಿದಾಗ, ಅಲ್ಲಿ HOMESTAY BUSINESS ಮಾಡಲು ತೀರ್ಮಾನ ಮಾಡಿದ್ದೆವು, ಆರಂಭಿಕ ಹಂತದಲ್ಲಿ ಅನೇಕ ಅಡಚಣೆಗಳನ್ನು ಎದುರಿಸಬೇಕಾಯಿತು. ಕೋವಿಡ್-19 ಬಂದಾಗ HOMESTAY ವ್ಯವಹಾರಕ್ಕೆ ಸಾಕಷ್ಟು ಆರ್ಥಿಕ ಹೊಡೆತವಾಯಿತು. ಈ ಸಮಯದಲ್ಲಿ ನನ್ನ ಬೆನ್ನೆಲುಬು ಆಗಿದ್ದ ನನ್ನ ಯಜಮಾನರು ತೀರಿಕೊಂಡರು, ಆಗ ನನಗೆ ಏನು ಮಾಡಬೇಕೆಂಬುದು ತಿಳಿಯದೆ ಹೋಯಿತು, ಈ ಸಮಯವು ನಮಗೆ ದೃಢತೆಯನ್ನು ಪರೀಕ್ಷಿಸಿತು ಮತ್ತು ಹೊಸ ವಿಧಾನಗಳನ್ನು ಅಳವಡಿಸಲು ಪ್ರೇರೇಪಿಸಿತು.
ಈ ಸಮಯದಲ್ಲಿ ನನ್ನ ಜೊತೆ ಇದ್ದ ಸಹದ್ಯೋಗಿಗಳು ಕೆಲಸ ಬಿಡುವ ಪರಿಸ್ಥಿತಿ ಉಂಟಾಯಿತು, ನನಗೆ ಏನು ಮಾಡಬೇಕೆಂಬುದು ತಿಳಿಯುತ್ತಿರಲಿಲ್ಲ, ಒಂದು ದಿನ ಫೇಸ್ಬುಕ್ ಅಲ್ಲಿ ಸತ್ಯ ಸರ್ ಅವರ ಆಡ್ ನೋಡಿದೆ, ವೆಬಿನಾರ್ ಗೆ ಹೇಗೆ ಜಾಯಿನ್ ಆಗಬೇಕೆಂಬುದು ನನಗೆ ತಿಳಿಯುತ್ತಿರಲಿಲ್ಲ, ಹೇಗೋ ಒಂದು ದಿನ ಜಾಯಿನ್ ಆಗಿ 21 ದಿನದ ಚಾಲೆಂಜ್ ಅಟೆಂಡ್ ಮಾಡಿದೆ. ನಂತರ ಇದರಲ್ಲಿ ಏನೋ ಒಂದು ಇದೆ ಎಂದು ಡೈಮಂಡ್ ಮೆಂಬರ್ ಆಗಿ ಜಾಯಿನ್ ಆಗಿದೆ, ಅದಂತೂ ನನಗೆ ವಜ್ರದ ಗಣಿ ಆಗಿ ಸಿಕ್ಕಿತು.
ಈ ಡೈಮಂಡ್ ಮೆಂಬರ್ ಗೆ ಸೇರಿದರೆ ಕಲ್ಲಿದ್ದಲ್ಲನ್ನು ಸಾಣಿ ಇಡಿದು ಸಮಾಜಕ್ಕೆ ವಜ್ರದ ಗಣಿಯಾಗಿ ಬಿಡುತ್ತಾರೆ ಎಂಬುದು ತಿಳಿದಿದೆ. CHATGPT ಅಂತು ನನಗೆ ತುಂಬಾನೇ ಉಪಯೋಗವಾಗಿದೆ, ಪವರ್ ಆಫ್ ಸೈಲೆನ್ಸ್ ಅಟೆಂಡ್ ಮಾಡಿ ನನ್ನಲ್ಲಿ ಇದ್ದ ಡಿಫಾಲ್ಟ್ ಎಲ್ಲ ಹೋಗಿದೆ.
BTA ಇಂದ ನನಗೆ ಹೊಸ ಚೈತನ್ಯ ಬಂದಿದೆ, BTA ಗೆ ಸೇರಿದಾಗ ನನಗೆ 64 ವರ್ಷ ವಯಸ್ಸಾಗಿತ್ತು, ವಯಸ್ಸನ್ನು ಲೆಕ್ಕಿಸದೆ ನಾನು ಮುನ್ನುಗಿದೆ, HOMESTAY BUSINESS ಪ್ರಾರಂಭಿಸಿದ ದಿನಗಳಲ್ಲಿ ಕಸ್ಟಮರ್ಸ್ ಕಳೆದುಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ನಾನು ನಿರಾಸೆಗೊಳಗಾಗದೆ, HOMESTAY BUSINESS ಯ ಸೇವೆಯನ್ನು ಸುಧಾರಿಸಲು ಪ್ರಯತ್ನಿಸಿದೆ. ಟೂರಿಸ್ಟ್ಗಳಿಗೆ ಬೇಕಾಗುವ ಸೌಲಭ್ಯಗಳನ್ನು ಕಲಿಯಲು ನಾನು ಹೊಸ ವಿಷಯಗಳನ್ನು ತಿಳಿಯಲು ಪ್ರಾರಂಭಿಸಿದೆ. ಹೊಸ ಗ್ರಾಹಕರು ನನ್ನ HOMESTAY BUSINESS ಯನ್ನು ಬಂದು ನೋಡತೊಡಗಿದರು. ಇವತ್ತು ನಮ್ಮ ಹೋಂಸ್ಟೇಯ ಪ್ರಮುಖ ಪ್ರವಾಸಿ ತಾಣವಾಗಿದೆ.
ಇನ್ನು 10 ವರ್ಷದಲ್ಲಿ ನನ್ನದ ದೇವಗಿರಿ ಹೋಂ ಸ್ಟೇ ಅನ್ನು ವರ್ಲ್ಡ್ ಕ್ಲಾಸ್ ಮಾಡಬೇಕೆಂಬುದು ನನ್ನ ಗುರಿ ಆಗಿದೆ.
ಇವರ ಕಥೆ ಇಂದ ನಾವು ಕಲಿಯಬಹುದಾದ ವಿಷಯ: ಸಾಧನೆ ಮಾಡುವ ಛಲವಿದ್ದರೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ, ಒಂಟಿ ಯಾಗಿ ಇದ್ದು ಸಾದಿಸಿ ತೋರಿಸಬಹುದು ಎಂದು ತೋರಿಸಿದ್ದಾರೆ, ಇವರು BTA ನ ತುಂಬಾ ಜನ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ಇವರ ವಿಡಿಯೋ ನೋಡಬೇಕಾದರೆ ಲಿಂಕ್ ಕ್ಲಿಕ್ ಮಾಡಿ
ರಮ ದೇವಿಯ ಶ್ರಮ ಮತ್ತು ಬದ್ಧತೆ ಗಮನಾರ್ಹವಾಗಿತ್ತು. BTA ಡೈಮಂಡ್ ಸದಸ್ಯೆಯಾಗಿ, ಅವರು ತಮ್ಮ ಸಾಧನೆಗಳಿಗೆ ಗುರುತಿಸಲ್ಪಟ್ಟರು. ಅವರ ಪಯಣವು ಸರಿಯಾದ ಮನೋಭಾವ ಮತ್ತು ಬೆಂಬಲದೊಂದಿಗೆ ಏನು ಸಾಧಿಸಬಹುದು ಎಂಬುದಕ್ಕೆ ಪ್ರಬಲ ಉದಾಹರಣೆಯಾಗಿದೆ.
ನಿಮಗೆ ಶ್ರದ್ಧೆ, ಶ್ರಮ, ಮತ್ತು ಸತ್ಯಸಂಧತೆ ನೀಡಬಹುದಾದ ಬಲದ ಕುರಿತು ಅವರ ಕಥೆಯು ಉತ್ತಮ ಪ್ರೇರಣೆಯಾಗಿದೆ.
ನೀವು ನಿಮ್ಮ ಬಿಸಿನೆಸ್ ಅನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಸಲು ಮಾಸ್ಟರ್ ಕ್ಲಾಸ್ ಗೆ ರಿಜಿಸ್ಟರ್ ಆಗಿ